ಝೀ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 (Bharjari bachelors season 2) ಪ್ರಸಾರವಾಗುತ್ತಿದೆ. ಈ ಶೋಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಚಿತ ರಾಮ್ ಜಡ್ಜ್ ಆಗಿದ್ದರೆ ನಿರಂಜನ್ ದೇಶಪಾಂಡೆ ನಿರೂಪಕರಾಗಿದ್ದಾರೆ. ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಿರಂಜನ್ ದೇಶಪಾಂಡೆ ಖ್ಯಾತಿ ಪಡೆದವರು. ಜೀವನ ಲೈಫ್ ಸ್ಟೋರಿ ಕೇಳಿದ್ರೆ ಎಂತವರ ಕಣ್ಣಲ್ಲೂ ನೀರು ಬರುತ್ತೆ.
ಸಾಕಷ್ಟು ಕಷ್ಟಗಳನ್ನು ಅನುಭವಿಸಿ ನಿರಂಜನ್ ಮೇಲೆ ಬಂದವರು. ಇವರ ಮದುವೆ ಸ್ಟೋರಿ ಕೂಡ ರೋಚಕ. ಕನ್ನಡದ ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಯಾಗಿದ್ದ ನಿರಂಜನ್ ದೇಶಪಾಂಡೆ, ಅಲ್ಲಿಂದ ಇಂದು ಕನ್ನಡದ ಟಾಪ್ ನಿರೂಪಕರಾಗಿ ಮಿಂಚುತ್ತಿದ್ದಾರೆ. ಸದ್ಯ ಅವರು ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ತಮ್ಮ ಜೀವನದ ಕಹಿ ನೋವುಗಳನ್ನು ಹಂಚಿಕೊಂಡು, ಕಣ್ಣೀರಿಟ್ಟಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ 2 ಶೋನಲ್ಲಿ ಫ್ಯಾಮಿಲಿ ರೌಂಡ್ ಆಯೋಜಿಸಲಾಗಿತ್ತು. ಈ ಎಪಿಸೋಡ್ ಸಾಕಷ್ಟು ಭಾವನಾತ್ಮಕತೆಯಿಂದ ಕೂಡಿತ್ತು. ಡ್ರೋನ್ ಪ್ರತಾಪ್, ಸುನೀಲ್ ಮುಂತಾದವರು ತಮ್ಮ ಪೋಷಕರು ಬಂದಾಗ ಕಣ್ಣೀರಿಟ್ಟಿದ್ದರು. ಡ್ರೋನ್ ಪ್ರತಾಪ್ ಅವರಂತೂ ಅಪ್ಪ-ಅಮ್ಮನ ಕಾಲು ತೊಳೆದು ಪೂಜೆ ಮಾಡಿದ್ದಾರೆ. ಇದೇ ವೇಳೆ ಶೋನ ಜಡ್ಜ್ ರವಿಚಂದ್ರನ್ ಅವರು ನಿರಂಜನ್ ದೇಶಪಾಂಡೆಗೆ ಒಂದು ಪ್ರಶ್ನೆ ಕೇಳಿದ್ದಾರೆ.
ನನಗೆ ಕ್ಯೂರಿಯಸಿಟಿ ಇದೆ, ನಿನ್ನೊಳಗೆ ಇರುವ ನೋವನ್ನು ಆಚೆ ತೆಗಿ, ನಾನು ಕೂಡ ಕೇಳಬೇಕು ಇವತ್ತು ಎಂದು ರವಿಚಂದ್ರನ್ ಹೇಳಿದಾಗ ಭಾವುಕರಾದ ನಿರಂಜನ್, ತಮ್ಮ ಬಾಲ್ಯದ ಕಹಿ ನೆನಪುಗಳನ್ನು ಹಂಚಿಕೊಂಡು ಕಣ್ಣೀರಿಟ್ಟರು. ತಂದೆ ತಾಯಿ ದೂರವಾದ ಬಗ್ಗೆ ಮತ್ತು 18ನೇ ವಯಸ್ಸಿನಲ್ಲಿ ಮನೆಯಿಂದ ಹೊರಬಂದ ಬಗ್ಗೆ ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ. ನಾನು ಚಿಕ್ಕವನಿರುವಾಗಲೇ ನಮ್ಮ ತಂದೆ- ತಾಯಿ ದೂರವಾದರು. ನಾನು 18ನೇ ವಯಸ್ಸಿನಲ್ಲಿ ಮನೆ ಬಿಟ್ಟು ಆಚೆ ಬಂದೆ. ಒಬ್ಬೊಬ್ಬರು ಒಂದೊಂದು ಕಡೆ ಇದ್ದಾರೆ. ಸದ್ಯ ಈಗ ನಾನು ನನ್ನ ಹೆಂಡತಿ ಅಷ್ಟೇ ಜೊತೆಯಾಗಿ ಇದ್ದೀವಿ ಎಂದು ಹೇಳಿಕೊಂಡಿದ್ದಾರೆ.
ಆಗ ಅವರಿಗೆ ತಂದೆಯಿಂದ ಸರ್ಪ್ರೈಸ್ ಕಾಲ್ ಬಂದಿದೆ. ಇದಾದ ಬಳಿಕ ಜೀವ ಮತ್ತು ಜೀವನ ಒಂದು ಸಲ ಮಾತ್ರ ಸಿಗುತ್ತದೆ. ಬೇರೆಯವರ ನಗುವಿನಲ್ಲಿ ನಾನು ನನ್ನ ನಗುವನ್ನು ಕಾಣುತ್ತೇನೆ ಎಂದು ನಿರಂಜನ್ ದೇಶಪಾಂಡೆ ಕಣ್ಣೀರು ಇಟ್ಟಿದ್ದಾರೆ. ಆಗ ರಚಿತಾ ರಾಮ್ ಹಾಗೂ ರವಿಚಂದ್ರನ್ ಅವರು ವೇದಿಕೆಗೆ ಬಂದು ನಿರಂಜನ್ರನ್ನು ಸಮಾಧಾನ ಮಾಡಿದ್ದಾರೆ.
Rajath Kishan: ನಡುರಾತ್ರಿ ರೋಡ್ನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ರಜತ್ ಕಿಶನ್: ವಿಡಿಯೋ