ಶಿರಸಿ: ಕೆಡಿಪಿ ಸಭೆಗೂ ಕಬಡ್ಡಿ ಮ್ಯಾಚಿಗೂ ವ್ಯತ್ಯಾಸ ಗೊತ್ತಿಲ್ಲದ ಶಾಸಕರು ಭೀಮಣ್ಣ ನಾಯ್ಕ ಎಂದು ಸಾಮಾಜಿಕ ಕಾರ್ಯಕರ್ತ ಅನಂತ ಮೂರ್ತಿ ಹೆಗಡೆ ಲೇವಡಿ ಮಾಡಿದರು. ಸರಿಯಾದ ತಹಸೀಲ್ದಾರ್, ಪೂರ್ಣ ಪ್ರಮಾಣದ ಎಸಿ, ಪೌರಾಯುಕ್ತರನ್ನು ನೀಡಲಾಗದ ಸರಕಾರ ಮನೆಗೆ ಹೋಗಲಿ. ಸರಿಯಾದ ಆಡಳಿತ ನೀಡಲು ಸಾಧ್ಯವಾಗದ ಸರಕಾರ. ಸಾರ್ವಜನಿಕರಿಗೆ ಉತ್ತಮ ಆಡಳಿತವನ್ನು ನೀಡಲು ಸಾಧ್ಯವಿಲ್ಲ ಎಂದ ಅವರು, ನಂತರ ಹಲವರೊಂದಿಗೆ ಕಚೇರಿಯಲ್ಲಿಂದು ಮನವಿ ನೀಡಿದರು.
ಇದನ್ನೂ ಓದಿ: Sirsi News: ತುಳಸಿಯ ಮುಡಿಗೆ ಗ್ಲೋಬಲ್ ಚೈಲ್ಡ್ ಪ್ರೊಡಿಜಿ ಅವಾರ್ಡ್
ಶಿರಸಿ ಎಸಿಗೆ ದೂರದ ಭಟ್ಕಳದ ಇನ್ ಚಾರ್ಜ್ ನೀಡಿದ್ದು ಸರಿಯಾದ ಕ್ರಮವಲ್ಲ. ಅಲ್ಲೇ ಹತ್ತಿರದ ತಾಲೂಕಿನ ಎಸಿಯವರನ್ನು ಪ್ರಭಾರಯಾಗಿಸಬಹುದಿತ್ತು. ಆಡಳಿತ ಹೇಗೆ ನಡೆಸಬೇಕು ಎನ್ನುವುದೇ ರಾಜ್ಯ ಸರಕಾರಕ್ಕೆ ತಿಳಿದಿಲ್ಲ.
-ಜಿಎಸ್ ಹೆಗಡೆ ಮಾಜಿ ಆರ್ ಟಿ ಓ ಅಧಿಕಾರಿ