ಲಖನೌ: ಜಿತೇಶ್ ಶರ್ಮಾ ( 85* ) ಹಾಗೂ ಮಯಾಂಕ್ ಅಗರ್ವಾಲ್ (41* ) ಅವರ 107 ನಿರ್ಣಾಯಕ ಜೊತೆಯಾಟದ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ 6 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸುವ ಮೂಲಕ ಆರ್ಸಿಬಿ 8 ವರ್ಷಗಳ ಬಳಿಕ ಮೊದಲನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಿತು. ಇದರೊಂದಿಗೆ ಮೇ 29 ರಂದು ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್ ವಿರುದ್ದ ಬೆಂಗಳೂರು ತಂಡ ಮೊದಲ ಕ್ವಾಲಿಫೈಯರ್ ಹಣಾಹಣಿಯಲ್ಲಿ ಕಾದಾಟ ನಡೆಸಲಿದೆ. ಇನ್ನು ಗೆಲುವಿನೊಂದಿಗೆ ಟೂರ್ನಿಯ ಅಭಿಯಾನವನ್ನು ಮುಗಿಸಲು ಬಯಸಿದ್ದ ಲಖನೌ ಸೂಪರ್ ಜಯಂಟ್ಸ್ಗೆ ಭಾರಿ ನಿರಾಶೆಯಾಯಿತು.
ಮಂಗಳವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಎಲ್ಎಸ್ಜಿ ನೀಡಿದ್ದ 228 ರನ್ಗಳ ಗುರಿಯನ್ನು ಹಿಂಬಾಲಿಸಿದ ಆರ್ಸಿಬಿ ತಂಡ, ವಿರಾಟ್ ಕೊಹ್ಲಿ, ಜಿತೇಶ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಅವರ ನಿರ್ಣಾಯಕ ಬ್ಯಾಟಿಂಗ್ ಬಲದಿಂದ 18.4 ಓವರ್ಗಳಿಗೆ 4 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಆ ಮೂಲಕ 6 ರನ್ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಮೂರನೇ ಗರಿಷ್ಠ ಮೊತ್ತವನ್ನು ಚೇಸ್ ಮಾಡಿದ ತಂಡ ಎಂಬ ಕೀರ್ತಿಗೆ ಆರ್ಸಿಬಿ ಪಾತ್ರವಾಯಿತು.
RCB vs LSG: ಎರಡನೇ ಐಪಿಎಲ್ ಶತಕ ಸಿಡಿಸಿ ಫಾರ್ಮ್ಗೆ ಮರಳಿದ ರಿಷಭ್ ಪಂತ್!
ವಿರಾಟ್ ಕೊಹ್ಲಿ ಅರ್ಧಶತಕ
ಬೃಹತ್ ಮೊತ್ತದ ಗುರಿಯನ್ನು ಹಿಂಬಾಲಿಸಿದ ಆರ್ಸಿಬಿಗೆ ಓಪನರ್ಸ್ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಪವರ್ಪ್ಲೇನಲ್ಲಿ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, 19 ಎಸೆತಗಳಲ್ಲಿ 30 ರನ್ ಗಳಿಸಿ 30 ರನ್ ಗಳಿಸಿದ ಬಳಿಕ ಫಿಲ್ ಸಾಲ್ಟ್ ವಿಕೆಟ್ ಒಪ್ಪಿಸಿದರು. ಮಯಾಂಕ್ ಅಗರ್ವಾಲ್ ಬದಲು ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ರಜತ್ ಪಾಟಿದಾರ್ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಮುಂದಿನ ಎಸೆತದಲ್ಲಿಯೇ ಲಿಯಾಮ್ ಲಿವಿಂಗ್ಸ್ಟೋನ್ ಗೋಲ್ಡನ್ ಡಕ್ಔಟ್ ಆದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ್ದ ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 54 ರನ್ ಗಳಿಸಿ ತಂಡವನ್ನು ಗೆಲ್ಲಿಸಿವ ಹಾದಿಯಲ್ಲಿದ್ದರು. ಆದರೆ, ಆವೇಶ್ ಖಾನ್ ಎಸೆದಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಆರ್ಸಿಬಿ 123 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
They are pumped up & HOW 🥳@RCBTweets enter the 🔝 2️⃣ with momentum led by their charismatic skipper Jitesh Sharma 🔥
Scorecard ▶ https://t.co/h5KnqyuYZE #TATAIPL | #LSGvRCB pic.twitter.com/N0YAz0f95u
— IndianPremierLeague (@IPL) May 27, 2025
ಮಯಾಂಕ್-ಜಿತೇಶ್ ಜುಗಲ್ಬಂದಿ
ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ ಬಳಿಕ ಆರ್ಸಿಬಿ ಗೆಲ್ಲುವುದು ಅನುಮಾನ ಎಂದೇ ಭಾವಿಸಲಾಗಿತ್ತು. ಆದರೆ, ಜಿತೇಶ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಐದನೇ ವಿಕೆಟ್ಗೆ 107 ರನ್ಗಳ ನಿರ್ಣಾಯಕ ಜೊತೆಯಾಟವನ್ನು ಆಡುವ ಮೂಲಕ ಆರ್ಸಿಬಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಮಯಾಂಕ್ ಅಗರ್ವಾಲ್ 23 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿದರು.
For his scintillating match winning 33-ball 85*, Jitesh Sharma receives the Player of the Match award 👏
Relive his knock ▶ https://t.co/WTKKaGgSV5 #TATAIPL | #LSGvRCB pic.twitter.com/4z51CIo7H5
— IndianPremierLeague (@IPL) May 27, 2025
ನಾಯಕನ ಆಟವಾಡಿದ ಜಿತೇಶ್ ಶರ್ಮಾ
ಆರ್ಸಿಬಿ ಇನಿಂಗ್ಸ್ನಲ್ಲಿ ಎಲ್ಲರ ಗಮನ ಸೆಳೆದಿದ್ದು ಜಿತೇಶ್ ಶರ್ಮಾ ಬ್ಯಾಟಿಂಗ್. ಎಸ್ಆರ್ಎಚ್ ವಿರುದ್ದ ಪಂದ್ಯವನ್ನು ಮುಗಿಸುವಲ್ಲಿ ಎಡವಿದ್ದ ಜತೇಶ್, ಲಖನೌ ಎದುರು ಯಾವುದೇ ತಪ್ಪು ಮಾಡಲಿಲ್ಲ. ಸಮಯಕ್ಕೆ ತಕ್ಕಂತೆ ಬ್ಯಾಟ್ ಬೀಸಿದ ಆರ್ಸಿಬಿ ಹಂಗಾಮಿ ನಾಯಕ, ಕೇವಲ 33 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 8 ಬೌಂಡರಿಗಳ ಮೂಲಕ ಅಜೇಯ 85 ರನ್ ಸಿಡಿಸಿದರು. ಆ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸಿಕ್ಸರ್ ಮೂಲಕ ತಂಡವನ್ನು ಗೆಲ್ಲಿಸಿದ್ದು ವಿಶೇಷವಾಗಿತ್ತು.
Finding – from home 🫡#RCB make history with their epic victory in Lucknow ❤#TATAIPL | #LSGvRCB | @RCBTweets pic.twitter.com/xS7WuuMqLM
— IndianPremierLeague (@IPL) May 27, 2025
227 ರನ್ ಕಲೆ ಹಾಕಿದ ಆರ್ಸಿಬಿ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಲಖನೌ ಸೂಪರ್ ಜಯಂಟ್ಸ್ ತಂಡ, ರಿಷಭ್ ಪಂತ್ ಶತಕ ಹಾಗೂ ಮಿಚೆಲ್ ಮಾರ್ಷ್ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ 3 ವಿಕೆಟ್ಗಳ ನಷ್ಟಕ್ಕೆ 227 ರನ್ಗಳನ್ನು ಕಲೆ ಹಾಕಿತ್ತು. ಆ ಮೂಲಕ ಆರ್ಸಿಬಿಗೆ 228 ರನ್ಗಳ ಗುರಿಯನ್ನು ನೀಡಿತ್ತು.
RCB vs LSG: ಶತಕ ಸಿಡಿಸಿ ಪಲ್ಟಿ ಹೊಡೆದು ವಿಚಿತ್ರವಾಗಿ ಸಂಭ್ರಮಿಸಿದ ರಿಷಭ್ ಪಂತ್!
ಪಂತ್-ಮಾರ್ಷ್ ಜುಗಲ್ಬಂದಿ
ಏಡೆನ್ ಮಾರ್ಕ್ರಮ್ ಬದಲು ಲಖನೌ ಪರ ಇನಿಂಗ್ಸ್ ಆರಂಭಿಸಿದ್ದ ಮ್ಯಾಥ್ಯೂ ಬ್ರಿಟ್ಜ್ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್ಗೆ ಜೊತೆಯಾದ ಮಿಚೆಲ್ ಮಾರ್ಷ್ ಹಾಗೂ ರಿಷಭ್ ಪಂತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ ಮುರಿಯದ ಎರಡನೇ ವಿಕೆಟ್ಗೆ 152 ರನ್ಗಳನ್ನು ಕಲೆ ಹಾಕಿದರು. ಆ ಮೂಲಕ ಲಖನೌ ತಂಡ 200ರ ಗಡಿ ದಾಟಲು ನೆರವು ನೀಡಿದರು. ಸ್ಪೋಟಕ ಬ್ಯಾಟ್ ಮಾಡಿದ ಮಿಚೆಲ್ ಮಾರ್ಷ್ ಕೇವಲ 37 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 67 ರನ್ಗಳನ್ನು ಸಿಡಿಸಿ ವಿಕೆಟ್ ಒಪ್ಪಿಸಿದರು.
Innings break!
Rishabh Pant leads from the front with a ritzy 💯 to take #LSG to 227/3 🔥
Will #RCB pull off this hilly task? 🤔
Scorecard ▶ https://t.co/h5KnqyuYZE #TATAIPL | #LSGvRCB pic.twitter.com/k50cNKn9DB
— IndianPremierLeague (@IPL) May 27, 2025
7 ವರ್ಷಗಳ ಬಳಿಕ ಶತಕ ಸಿಡಿಸಿದ ಪಂತ್
ಈ ಸೀಸನ್ ಕಳೆದ 12 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರಿಷಭ್ ಪಂತ್ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಆದರೆ, ಮಂಗಳವಾರ ಆರ್ಸಿಬಿ ಎದುರಿನ ಪಂದ್ಯದಲ್ಲಿ ಪಂತ್ ತಮ್ಮ ಐಪಿಎಲ್ ವೃತ್ತಿ ಜೀವನದ ಎರಡನೇ ಶತಕವನ್ನು ಬಾರಿಸಿದ್ದಾರೆ. ಮೊದಲನೇ ಎಸೆತದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಿದ ರಿಷಭ್ ಪಂತ್, 61 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 118 ರನ್ಗಳನ್ನು ಬಾರಿಸಿದರು. ಆ ಮೂಲಕ ಭರ್ಜರಿ ಫಾರ್ಮ್ಗೆ ಮರಳಿದ್ದಾರೆ.
ಸ್ಕೋರ್ ವಿವರ
ಲಖನೌ ಸೂಪರ್ ಜಯಂಟ್ಸ್: 20 ಓವರ್ಗಳಿಗೆ 227-3 (ರಿಷಭ್ ಪಂತ್ 118*, ಮಿಚೆಲ್ ಮಾರ್ಷ್ 67 ; ನುವಾನ್ ತುಷಾರ 26 ಕ್ಕೆ 1)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 18.4 ಓವರ್ಗಳಿಗೆ 230-4 ( ಜಿತೇಶ್ ಶರ್ಮಾ 85*, ವಿರಾಟ್ ಕೊಹ್ಲಿ 54, ಮಯಾಂಕ್ ಅಗರ್ವಾಲ್ 41, ಫಿಲ್ ಸಾಲ್ಟ್ 30; ವಿಲಿಯಮ್ ರೌರ್ಕಿ 74-2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಜಿತೇಶ್ ಶರ್ಮಾ