ತಿಪಟೂರು: ಕೆಎಸ್ಆರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟ ಘಟನೆ (Tiptur Accident) ತಾಲೂಕಿನ ಕಸಬಾ ಹೋಬಳಿ ಮತ್ತಿಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಂಭವಿಸಿದೆ. ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ಪರಸ್ವರ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ಅಯ್ಯನ ಬಾವಿಯ ನಿವಾಸಿಗಳಾದ ಉಮೇಶ್ (32), ರಜಿನಿಕಾಂತ್ (33) ಮೃತಪಟ್ಟ ದುದೈವಿಗಳು.
ಕೊಬ್ಬರಿ ನಾಡಿನ ಜನತೆಯಿಂದ ಭಾರತೀಯ ಸೇನೆಗೆ ಗೌರವ
ತಿಪಟೂರು: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂದೂರ್’ ಹೆಸರಿನಡಿಯಲ್ಲಿ, ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡುವುದರ ಜತೆಗೆ ನೂರಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ತಿರಂಗಾ ಯಾತ್ರೆ ಮಾಡುವುದರ ಮೂಲಕ ಭಾರತೀಯ ಸೈನಿಕರಿಗೆ ಕೊಬ್ಬರಿ ನಾಡಿನ ಜನತೆ ಗೌರವ ಸಲ್ಲಿಸಿದರು.
ತಿರಂಗಾ ಯಾತ್ರೆಯಲ್ಲಿ ನಿವೃತ್ತ ಭಾರತೀಯ ಸೈನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸ್ವಯಂ ಪ್ರೇರಿತವಾಗಿ ಹಲವರು ಭಾಗವಹಿಸಿದ್ದರು. ಅಂದಾಜು 3 ಕಿ.ಮೀ ಉದ್ದದ ತಿರಂಗಾ ಯಾತ್ರೆಯಲ್ಲಿ 8,000ಕ್ಕೂ ಅಧಿಕ ಜನ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಗ್ರಾಮ ದೇವತೆ ಕೆಂಪಮ್ಮ ದೇವಿ ದೇವಸ್ಥಾನದಿಂದ ಸಂತೆಪೇಟೆ ಬೀದಿಯ ಮೂಲಕ ಬಿ.ಎಚ್.ರಸ್ತೆಯಲ್ಲಿ ಸಾಗಿ ಕಲ್ಪತರು ಕ್ರೀಡಾಂಗಣದಲ್ಲಿ ತಿರಂಗ ಯಾತ್ರೆ ಮುಕ್ತಾಯಗೊಂಡಿತು.
ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದ್ದ ನಿವೃತ್ತ ಸೈನಿಕರಿಗೆ, ಸನ್ಮಾನ ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಷಡಕ್ಷರಿ ಮಠದ ಶ್ರೀ ಶ್ರೀ ರುದ್ರಮುನಿ ಸ್ವಾಮೀಜಿ, ಕಾಡ ಸಿದ್ದೇಶ್ವರ ಮಠದ ಕಿರಿಯ ಸ್ವಾಮೀಜಿ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಬಿಜೆಪಿ ಮುಖಂಡ ಲೋಕೇಶ್ವರ್, ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ಕಾಂಗ್ರೆಸ್ ಯುವ ಮುಖಂಡ ನಿಖಿಲ್ ರಾಜಣ್ಣ ಸೇರಿ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರಕಾರಿ ಮತ್ತು ಖಾಸಗಿ ಶಾಲೆಗಳ ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಈ ಸುದ್ದಿಯನ್ನೂ ಓದಿ | Mangalore News: ರಹೀಂ ಶವಯಾತ್ರೆ ವೇಳೆ ಶೋರೂಮ್ಗೆ ಕಲ್ಲು ತೂರಾಟ; ಬಲವಂತವಾಗಿ ಬಂದ್ ಮಾಡಿಸಿದ ಕಿಡಿಗೇಡಿಗಳು