
ಐಪಿಎಲ್ 2025ರ. (IPL 2025) ಮಧ್ಯೆ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ (West Indies vs England) ನಡುವೆ ಏಕದಿನ ಸರಣಿ ಆರಂಭವಾಗುತ್ತಿದೆ. ಎರಡೂ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ತನ್ನ ಪ್ಲೇಯಿಂಗ್-11 ತಂಡವನ್ನು ಪ್ರಕಟಿಸಿದೆ.
ಈ ಪಂದ್ಯವು ಮೇ 29, ಗುರುವಾರ ಎಡ್ಜ್ಬಾಸ್ಟನ್ನಲ್ಲಿ ನಡೆಯಲಿದೆ. ವಿಶೇಷವೆಂದರೆ ಇಂಗ್ಲೆಂಡ್ನ ಹೊಸ ವೈಟ್–ಬಾಲ್ ನಾಯಕ ಹ್ಯಾರಿ ಬ್ರೂಕ್ ಮೊದಲ ಬಾರಿಗೆ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಐಪಿಎಲ್ನಲ್ಲಿದ್ದ ನಾಲ್ಕು ಆಟಗಾರರು ಇದ್ದಾರೆ. ಈ ಪಂದ್ಯವು ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆದಿಲ್ ರಶೀದ್ ಅವರ 150 ನೇ ಏಕದಿನ ಪಂದ್ಯವಾಗಿದೆ.

ಪ್ಲೇಯಿಂಗ್ ಇಲೆವೆನ್ನಲ್ಲಿ ನಾಲ್ವರು ಐಪಿಎಲ್ ಆಟಗಾರರು
ಐಪಿಎಲ್ 2025 ರ ಪ್ಲೇಆಫ್ಗಳಿಗೆ ಮುಂಚಿತವಾಗಿ ರಾಷ್ಟ್ರೀಯ ಕರ್ತವ್ಯವನ್ನು ನಿರ್ವಹಿಸಲು ತಮ್ಮ ದೇಶಕ್ಕೆ ಮರಳಿದ 4 ಆಟಗಾರರು ಇಂಗ್ಲೆಂಡ್ನ ಪ್ಲೇಯಿಂಗ್-11 ರಲ್ಲಿ ಸೇರಿದ್ದಾರೆ. ಇದರಲ್ಲಿ ಆಲ್ರೌಂಡರ್ ಜಾಕೋಬ್ ಬೆಥೆಲ್ (ಆರ್ಸಿಬಿ), ಮಾಜಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ (ಜಿಟಿ) ಮತ್ತು ವಿಲ್ ಜ್ಯಾಕ್ಸ್ (ಎಂಐ) ಅವರ ಹೆಸರುಗಳು ಸೇರಿವೆ ಇವರೆಲ್ಲರೂ ಪ್ಲೇ ಆಫ್ ತಂಡದಲ್ಲಿದ್ದವರಾದರೆ, ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವ ಸಿಎಸ್ಕೆ ತಂಡದ ಜೇಮೀ ಓವರ್ಟನ್ ಕೂಡ ಪ್ಲೇಯಿಂದ ಇಲೆವೆನ್ನಲ್ಲಿದ್ದಾರೆ
