ಗೌರಿಬಿದನೂರು: ಕಲಾ ರಂಗದಲ್ಲಿ ವಿಶಿಷ್ಠ ಸೇವೆ ಸಲ್ಲಿಸಿದ ತಾಲೂಕಿನ ಸವಿತಾಸಮಾಜದ ಆವಲಮೂರ್ತಿ ರವರಿಗೆ ನೈರುತ್ಯ ಅಮೆರಿಕಾ ವಿಶ್ವವಿದ್ಯಾಲಯದವರು ಗೌರವ ಡಾಕ್ಟರೇಟ್ ನನ್ನು ನೀಡಿರುವುದು ಸವಿತಾ ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ರಾಘವೇಂದ್ರ ತಿಳಿಸಿದು.
ಇದನ್ನೂ ಓದಿ: IPL 2025: GT vs MI ನಡುವೆ ಎಲಿಮಿನೇಟರ್ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಯಾವುದು?
ಇಂದು ಸವಿತಾ ಸಮಾಜದ ಭವನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡು ತ್ತಾ ಕಲಾವಿದರಿಗೆ ಇಂತಹ ಪ್ರಶಸ್ತಿಗಳು ಆತ್ಮ ಸಂತೃಪ್ತಿ ನೀಡುವುದಲ್ಲದೇ ಅವರ ಜವಾಬುದಾರಿ ಯನ್ನು ಹೆಚ್ಚಿಸುತ್ತದೆ ಎಂದರು.ಗ್ಲೋಬಲ್ ಅಚೀವ್ ಕೌನ್ಸಿಲ್ ರವರು ನೀಡಿರುವ ಡಾಕ್ಟರೇಟ್ ಇನ್ ಮ್ಯೂಜಿಕ್ ನಮ್ಮ ಸವಿತಾ ಸಮಾಜ ದವರಿಗೆ ದಕ್ಕಿರುವುದು ಸಂತೋಷದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಮುಖಂಢರಾದ ಅಮರೇಂದ್ರ ರಾಮು,ಮುಂತಾವರು ಹಾಜರಿದ್ದರು