ಅಪೋಲೋ ಕಾರ್ಯಾಚರಣೆಗಳ ಸಮಯದಲ್ಲಿ ವಿಜ್ಞಾನಿಗಳು ಚಂದ್ರನ ಮೇಲ್ಮೈಯಲ್ಲಿ ಪ್ರತಿಫಲಕಗಳನ್ನು ಸ್ಥಾಪಿಸಿದ್ದಾರೆ. ಇದರಿಂದ ಚಂದ್ರನ ದೂರವನ್ನು ನಿಖರವಾಗಿ ಅಳೆಯಲು ಲೇಸರ್ ಕಿರಣಗಳನ್ನು ಬಳಸಲಾಗುತ್ತದೆ. ಪ್ರಸ್ತುತ, ಚಂದ್ರನು ಭೂಮಿಯಿಂದ ಸರಾಸರಿ 3,84,400 ಕಿಲೋ ಮೀಟರ್ ದೂರದಲ್ಲಿದೆ. ಒಂದು ಕಕ್ಷೆಯನ್ನು ಪೂರ್ಣಗೊಳಿಸಲು ಸುಮಾರು 27.3 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂದಾಜಿನ ಪ್ರಕಾರ ಸುಮಾರು 200 ಮಿಲಿಯನ್ ವರ್ಷಗಳ ಬಳಿಕ ಭೂಮಿಯ ಮೇಲಿನ ಸಮಯ ದಿನಕ್ಕೆ 25 ಗಂಟೆ ಆಗಬಹುದು ಎನ್ನುತ್ತಾರೆ ವಿಜ್ಞಾನಿಗಳು.