ಹೈದರಾಬಾದ್: ಭಾರಿ ಕುತೂಹಲ ಕೆರಳಿಸಿದ್ದ ವಿಶ್ವ ಸುಂದರಿ ಸ್ಪರ್ಧೆ 2025 (Miss World 2025)ರ ಗ್ರ್ಯಾಂಡ್ ಫಿನಾಲೆ ಹೈದರಾಬಾದ್ನಲ್ಲಿ ನಡೆದಿದ್ದು, ಥಾಯ್ಲೆಂಡ್ನ ಓಪಲ್ ಸುಚಾಟಾ ಚಯವಾಂಗ್ಸ್ರಿ (Opal Suchata Chuangsri) ಕಿರೀಟವನ್ನು ತಮ್ಮದಾಗಿಸಿಕೊಂಡರು. ಹೈಟೆಕ್ಸ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಹಾಲಿ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಜ್ಕೋ (Krystyna Pyszkova) ಅವರು ಓಪಲ್ ಸುಚಾಟಾ ಚಯವಾಂಗ್ಸ್ರಿಗೆ ವಿಶ್ವ ಸುಂದರಿ ಕಿರೀಟ ತೊಡಿಸಿದರು. ಭಾರತದ ನಂದಿನಿ ಗುಪ್ತಾ ಅಗ್ರ 8ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದರು.
ಇನ್ನು ಇಥಿಯೋಪಿಯಾದ ಹ್ಯಾಸೆಟ್ ಡೆರೆಜೆ ಮೊದಲ ರನ್ನರ್ಅಪ್ ಆದರೆ, 2ನೇ ರನ್ನರ್ ಅಪ್ ಆಗಿ ಪೋಲೆಂಡ್ನ ಮಜಾ ಕ್ಲಾಜ್ಡಾ ಹೊರಹೊಮ್ಮಿದರು. ಈ ಬಾರಿ ಒಟ್ಟು 108 ಮಂದಿ ಸ್ಪರ್ಧಾ ಕಣದಲ್ಲಿದ್ದರು. 22 ವರ್ಷದ ಓಪಲ್ ಸುಚಾಟಾ ಚಯವಾಂಗ್ಸ್ರಿ ವಿದ್ಯಾರ್ಥಿನಿ ಮತ್ತು ರೂಪರ್ದರ್ಶಿ.