ಸಂಕೇಶ್ವರ: ಜೀವನದಲ್ಲಿ ಜಿಗುಪ್ಸೆಗೊಂಡು ಸಹೋದರರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗ ಶರಣಾಗಿರುವ(Self harming) ಘಟನೆ ಹುಕ್ಕೇರಿಯಲ್ಲಿ ನಡೆದಿದೆ. ಕೊಣಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಗಳನ್ನು ಸಂತೋಷ ರವೀಂದ್ರ ಗುಂಡೆ(55)ಮತ್ತು ಅಣ್ಣಾ ಸಾಹೇಬ ರವೀಂದ್ರ ಗುಂಡೆ(55)ಎಂದು ಗುರುತಿಸಲಾಗಿದೆ. ಮದುವೆ ಆಗಿಲ್ಲ ಎಂದು ಇಬ್ಬರೂ ಸಹೋದರರು ಬಹಳ ದುಃಖಿತರಾಗಿದ್ದರು. ಇದರಿಂದ ಇಬ್ಬರೂ ಮದ್ಯದ ಚಟಕ್ಕೆ ಬಿದ್ದಿದ್ದರು. ಕುಡಿದ ನಶೆಯಲ್ಲಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಷ ಪದಾರ್ಥ ಸೇವಿಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಇಬ್ಬರನ್ನೂ ತಕ್ಷಣ ಮಹಾರಾಷ್ಟ್ರದ ಗಡಹಿಂಗ್ಲಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗ್ಯೂ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Male Mahadeshwar hills: ಮಲೆ ಮಹದೇಶ್ವರ ದೇಗುಲದ ಗೋಪುರ ಏರಿ ಆತ್ಮಹತ್ಯೆಗೆ ಯತ್ನಿಸಿದ ಭೂಪ!