ಬೆಂಗಳೂರು: ವಿಭಿನ್ನ ರೀತಿಯ ಪ್ರಚಾರ ತಂತ್ರಗಳ ಮೂಲಕ ಗಮನ ಸೆಳೆದಿರೋ ಮಯೂರ್ ಕಡಿ ನಿರ್ದೇಶನದ ‘ಮಾತೊಂದ ಹೇಳುವೆ’ ಚಿತ್ರದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ. ರಿಲೀಸ್ ಆದ ಕ್ಷಣದಿಂದಲೇ ಟ್ರೇಲರ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಟ್ರೇಲರ್ ಬಿಡುಗಡೆಗೂ ಪೂರ್ವಭಾವಿಯಾಗಿ ಚಿತ್ರತಂಡ ‘ ಟ್ರೇಲರ್ ಡಿಕೋಡ್ ‘ ಸ್ಪರ್ಧೆ ಹೊರಬಿಟ್ಟಿತ್ತು. ಚಿತ್ರದ ನಾಯಕ ಮತ್ತು ನಾಯಕಿಯ ಡೈಲಾಗ್ ಮ್ಯೂಟ್ ಮಾಡಿ, ಜನರಿಗೆ ಡೈಲಾಗ್ ಊಹಿಸಲು ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಸರಿ ಉತ್ತರ ನೀಡಿದ ಮೊದಲ 5 ಜನರಿಗೆ ತಲಾ 5,000 ನಗದು ಬಹುಮಾನ ಎಂದು ಘೋಷಿಸಲಾಗಿತ್ತು. ಈಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ವಿಜೇತರಿಗೆ ಬಹುಮಾನ ಕೊಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಹುಬ್ಬಳ್ಳಿ – ಧಾರವಾಡ ಹುಡುಗ ಹಾಗೂ ಮೈಸೂರು ಭಾಗದ ಹುಡುಗಿಯ ಪ್ರೇಮ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಮಯೂರ್ ಕಡಿ, ರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ ಸತೀಶ್ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಕೆಲವು ಕಂಟೆಂಟ್ಗಳ ಮೂಲಕ ಪ್ರೇಕ್ಷಕರ ಮನ ತಲುಪಿರುವ ‘ಮಾತೊಂದ ಹೇಳುವೆ’ ಚಿತ್ರ ಜೂನ್ 20 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
Humour. Drama. Emotions!
Maatonda Heluve Trailer for you| Plz Retweet if you like it |
In Theatres June 20th | Celebrate FeelingsTrailer link:https://t.co/H4VDKmc4MK
A youthful family entertainer to make you feel love, laughter & life
Hubballi-Dharwad ಹುಡುಗನ ಕಥೆ.. Mysuru… pic.twitter.com/mTqGUx5Vt6
— Mayur Kadi (@mayurkadi1995) June 1, 2025
ʼಕುರುಡು ಕಾಂಚಾಣʼ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ ರಾಕ್ ಸ್ಟಾರ್ ರೋಹಿತ್
ಬೆಂಗಳೂರು: ವಿ.ಟಾಕೀಸ್ ಲಾಂಛನದಲ್ಲಿ ಅರುಣ್ ಕುಮಾರ್ ಜೆ ಹಾಗೂ ಡಾ. ಶ್ರೇಯಸ್ ಎಸ್. ನಿರ್ಮಿಸಿರುವ, ಕೆ.ಎಸ್. ಮಂಜುನಾಥ್ ರೆಡ್ಡಿ ಅವರ ಸಹ ನಿರ್ಮಾಣವಿರುವ ಹಾಗೂ ಸಂಗೀತ ನಿರ್ದೇಶಕನಾಗಿ ಹೆಸರು ಮಾಡಿರುವ ಎಸ್. ಪ್ರದೀಪ್ ವರ್ಮ ನಿರ್ದೇಶನದ ʼಕುರುಡು ಕಾಂಚಾಣʼ ಚಿತ್ರದ (Kurudu Kanchana Movie) ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ, ನಿರ್ದೇಶಕ, ರಾಕ್ ಸ್ಟಾರ್ ರೋಹಿತ್ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರೈಸಿರುವ, ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಕುರುಡು ಕಾಂಚಾಣ” ಚಿತ್ರ ತೆರೆಗೆ ಬರುವ ಹಂತದಲ್ಲಿದೆ.
ʼಕುರುಡು ಕಾಂಚಾಣʼ ಚಿತ್ರದ ಚಿತ್ರೀಕರಣವು ಬೆಂಗಳೂರು, ಕುಣಿಗಲ್, ಚಿಕ್ಕಮಗಳೂರು, ವರ್ಕಳ ಹಾಗೂ ವೈನಾಡ್ನಲ್ಲಿ ನಡೆದಿದೆ. ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಎಚ್. ಗೀತಾ ಕೈವಾರ ಸಂಗೀತ ನೀಡಿದ್ದಾರೆ. ವಿ. ಮನೋಹರ್, ವರದರಾಜ್ ಚಿಕ್ಕಬಳ್ಳಾಪುರ, ಅರ್ಚನಾ ಮರವಂತೆ ಹಾಡುಗಳನ್ನು ಬರೆದಿದ್ದಾರೆ. ಹಿನ್ನೆಲೆ ಸಂಗೀತವನ್ನು ನಿರ್ದೇಶಕ ಪ್ರದೀಪ್ ವರ್ಮ ಅವರೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Summer Season End Sale: ಸೀಸನ್ಗೂ ಮುನ್ನವೇ ಆರಂಭವಾಯ್ತು ಸಮ್ಮರ್ ಎಂಡ್ ಸೇಲ್
ಪ್ರವೀಣ್ ಶೆಟ್ಟಿ & ಗೌತಮ್ ಮಟ್ಟಿ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಕಿರಣ್ ರಾಜ್, ಎಸ್. ಪ್ರದೀಪ್ ವರ್ಮ, ಅಮೂಲ್ಯ ಗೌಡ, ಸಾಕ್ಷಿ ಮೇಘನಾ, ರೆಮೋ (ರೇಖಾ), ನಾಗೇಂದ್ರ ಅರಸ್ ಮುಂತಾದವರಿದ್ದಾರೆ.