ಬಾಗೇಪಲ್ಲಿ: ಅಶೋಕ್ ಕಂಪನಿಯ ತಳಿಯ ಬಿತ್ತನೆಬೀಜಗಳು ಉತ್ತಮವಾದ ಇಳುವರಿ ಬರುತ್ತಿದ್ದು, ರೈತರ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಸಹಕಾರಿ ಆಗಿದೆ ಎಂದು ಅಶೋಕ್ ಕಂಪನಿಯ ಅಧ್ಯಯ ನದ ವಿಭಾಗದ ತಜ್ಞ ಡಾ.ಪ್ರಕಾಶ್ ತಿಳಿಸಿದರು. ತಾಲ್ಲೂಕು ಜಿ ಚರ್ಲೋಪಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಶೋಕ್ ಕಂಪನಿಯ ಬಿತ್ತನೆ ಬೀಜಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಕಂಪನಿಯ ಅಧ್ಯಯನದ ವಿಭಾಗದ ತಜ್ಞ ಡಾ.ಪ್ರಕಾಶ್ ಮಾತನಾಡಿದರು.
ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ.ಚರ್ಲೊಪಲ್ಲಿ ಗ್ರಾಮದ ರೈತ ಶ್ರೀನಾಥ್ ತೊಟದಲ್ಲಿ ಕ್ಷೇತ್ರೋತ್ಸವದ ಅಂಗವಾಗಿ ರೈತರಿಗೆ, ರಸಗೊಬ್ಬರಗಳ ಮಾರಾಟಗಾರರಿಗೆ ಅಶೋಕ್ ಕಂಪನಿಯ ಬಿತ್ತನೆಬೀಜಗಳ, ಇಳುವರಿಯ ಬಗ್ಗೆ ರೈತರಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಶೋಕ್ ಕಂಪನಿಯಲ್ಲಿ ಬೀಟ್ಬೀಟ್, ಹುರಳಿಕಾಯಿ, ಚೆಂಡುಮಲ್ಲಿಗೆ, ಕೊತ್ತಂಬರಿ ಸೇರಿದಂತೆ ವಿವಿಧ ತಳಿಯ ಬಿತ್ತನೆಬೀಜಗಳು ಮಾರುಕಟ್ಟೆಯಲ್ಲಿ ಸಿಗಲಿದೆ. ಈಗಾಗಲೇ ಕ್ಷೇತ್ರದಲ್ಲಿ ಕೆಲ ರೈತರು ಅಶೋಕ್ ಕಂಪನಿಯ ಬೀಟ್ರೂಟ್, ಕೊತ್ತಂಬರಿ ಸೇರಿದಂತೆ ವಿವಿಧ ತಳಿಯ ಬಿತ್ತನೆಬೀಜಗಳು ಹಾಕಿದ್ದಾರೆ. ಬೀಟ್ ರೂಟ್ ಕಾಯಿಗಳು ಹಿಡಿಯಷ್ಟಕ್ಕೂ ಹೆಚ್ಚು ಗಾತ್ರ ಹೊಂದಿದ್ದು, ಹೆಚ್ಚಿನ ತೂಕ ಇವೆ. ಕೊತ್ತಂಬರಿ, ಬೀಟ್ ರೂಟ್, ಹುರಳಿ, ಚೆಂಡುಮಲ್ಲಿಗೆ ಹೂವುಗಳ ಬಿತ್ತನೆಬೀಜಗಳು ಬಿತ್ತನೆ ಮಾಡಿದ ಅನೇಕ ರೈತರು ಉತ್ತಮ ಇಳುವರಿ ಪಡೆದಿದ್ದು, ಹೆಚ್ಚಿನ ಲಾಭ ಗಳಿಸಿದ್ದಾರೆ ಎಂದರು.
ಇದನ್ನೂ ಓದಿ: RCB vs PBKS: ಸತತ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ!
ರೈತರಿಗೆ ಕಣ್ಣುಮುಂದೆಯೇ ಹೆಚ್ಚಿನ ಇಳುವರಿ ನೀಡಿದ ತರಕಾರಿಗಳು, ಹೂವುಗಳನ್ನು ರೈತರು ವೀಕ್ಷಣೆ ಮಾಡಬಹುದು, ಅಥವಾ ನಮ್ಮ ಕಂಪನಿಯಿAದ ಬಿತ್ತನೆ ಮಾಡಿದ ರೈತರ ಹೊಲ ಗದ್ದೆ ಗಳಿಗೆ ರೈತರು ವೀಕ್ಷಣೆ ಮಾಡಬಹುದು. ಉತ್ತಮವಾದ ಇಳುವರಿ ಬರುವ ತರಕಾರಿ, ಹೂವುಗಳ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಿ, ಉತ್ತಮವಾದ ಇಳುವರಿ ಪಡೆದು, ಹೆಚ್ಚಿನ ಲಾಭ ಪಡೆದು ಕೊಳ್ಳಬಹುದು ಎಂದು ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಶೋಕ್ ಕಂಪನಿಯ ಮುಖ್ಯಸ್ಥ ಸಿದ್ದರಾಮು ಮಾತನಾಡಿ, ‘ಕೊತ್ತಂಬರಿ ಬಿತ್ತನೆಬೀಜಗಳು ೫ ದಿನದಲ್ಲಿ ಮೊಳಕೆ ಹೊಡೆದು, ೩೦ ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದರಿಂದ ಅಧಿಕ ಇಳುವರಿಯಿಂದ ಅಧಿಕ ಲಾಭ ಪಡೆಯಬಹುದು. ಸೌತೆಕಾಯಿ, ಬೀಟ್ರೂಟ್ ನ ವಿವಿಧ ತಳಿಯ ಬಿತ್ತನೆಬೀಜಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಳೆಗೆ ಸಿಗಲಿದೆ. ರೈತರು ಕಡಿಮೆ ಬಿತ್ತನೆ ಬೀಜಗಳು ಪಡೆದು, ಅಧಿಕ ಇಳುವರಿ, ಲಾಭ ಪಡೆಯಬಹುದು’ ಎಂದು ತಿಳಿಸಿದರು.
ತಾಲ್ಲೂಕಿನ ಜಿ ಚರ್ಲೋಪಲ್ಲಿ, ಸಡ್ಲವಾರಿಪಲ್ಲಿ, ಮಲ್ಲಸಂದ್ರ, ಪೆನುಮಲೆ, ಬಾಲರೆಡ್ಡಿಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಅಶೋಕ್ ಕಂಪನಿಯ ಬಿತ್ತನೆಬೀಜಗಳ ಬಗ್ಗೆ ಮಾಹಿತಿ ಪಡೆದರು. ಅಶೋಕ್ ಕಂಪನಿಯ ಬೀಟ್ರೂಟ್ ತಳಿಯ ಬಿತ್ತನೆಬೀಜ ಹಾಕಿ, ಉತ್ತಮವಾದ ಇಳುವರಿ, ಲಾಭ ಪಡೆದ ರೈತರು, ನೆರೆದ ರೈತರ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡರು.
ನೆರೆದ ರೈತರು ಅಶೋಕ್ ಕಂಪನಿಯ ಬಿತ್ತನೆಬೀಜಗಳ ಧರಗಳು ಮಾರುಕಟ್ಟೆಯಲ್ಲಿ ಏರಿಕೆ ಇದೆ. ಕಂಪನಿಯವರು ಬಿತ್ತನೆಬೀಜಗಳ ಧರಗಳ ಏರಿಕೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಶೋಕ್ ಕಂಪನಿಯ ಅಧಿಕಾರಿಗಳಾದ ಶ್ರೀಧರ್, ಶಿವ, ಭಾಸ್ಕರ್, ಸುರೇಂದ್ರರೆಡ್ಡಿ ಸೇರಿದಂತೆ ರೈತರು ಇದ್ದರು.