ಅಹಮದಾಬಾದ್: ಪಂಜಾಬ್ ಕಿಂಗ್ಸ್ (PBKS) ತಂಡವನ್ನು 6 ರನ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಮಂಗಳವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶವನ್ನು ತೋರಿತು. ಇದರ ಫಲವಾಗಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು. ಆರ್ಸಿಬಿ ಚಾಂಪಿಯನ್ ಆದರೆ, ಸಾಯಿ ಸುದರ್ಶನ್, ಸೂರ್ಯಕುಮಾರ್ ಯಾದವ್ ಹಾಗೂ ವೈಭವ್ ಸೂರ್ಯವಂಶಿ ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ಹಾಗೂ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಈ ಋತುವಿನಲ್ಲಿ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ ಅವರು ಸೂಪರ್ ಸ್ಟ್ರೈಕರ್ ಪ್ರಶಸ್ತಿಯನ್ನು ತಮ್ಮ ಚೊಚ್ಚಲ ಆವೃತ್ತಿಯಲ್ಲಿಯೇ ಮುಡಿಗೇರಿಸಿಕೊಂಡಿದ್ದಾರೆ. 25 ವಿಕೆಟ್ ಕಿತ್ತ ಗುಜರಾತ್ ಟೈಟನ್ಸ್ ತಂಡದ ವೇಗಿ ಪ್ರಸಿಧ್ ಕೃಷ್ಣ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.
RCB vs PBKS: ಸತತ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ!
ಫೈರ್ ಪ್ಲೇ ಅವಾರ್ಡ್ ಅನ್ನು ಚನ್ನೈ ಸೂಪರ್ ಕಿಂಗ್ಸ್ ಗೆದ್ದುಕೊಂಡರೆ, ಪಿಚ್ ಹಾಗೂ ಗ್ರೌಂಡ್ ಪ್ರಶಸ್ತಿಯನ್ನು ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಪಡೆದುಕೊಂಡಿದೆ. ಈ ಋತುವಿನಲ್ಲಿ ಅತ್ಯಂತ ಶ್ರೇಷ್ಠ ಕ್ಯಾಚ್ ಪಡೆದ ಪ್ರಶಸ್ತಿಯನ್ನು ಸನ್ರೈಸರ್ಸ್ ಹೈದರಾಬಾದ್ ತಂಡದ ಕಮಿಂದು ಮೆಂಡಿಸ್ ಪಡೆದುಕೊಂಡಿದ್ದಾರೆ. ಇವರು ಸಿಎಸ್ಕೆ ತಂಡದ ಡೆವಾಲ್ಡ್ ಬ್ರೆವಿಸ್ ಕ್ಯಾಚ್ ಅನ್ನು ಪಡೆದಿದ್ದರು.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಶಸ್ತಿಗಳ ವಿವರ
ಐಪಿಎಲ್ 2025 ಚಾಂಪಿಯನ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಐಪಿಎಲ್ 2025 ರನ್ನರ್-ಅಪ್: ಪಂಜಾಬ್ ಕಿಂಗ್ಸ್
ಅತ್ಯುತ್ತಮ ಪಿಚ್ ಮತ್ತು ಗ್ರೌಂಡ್ ಪ್ರಶಸ್ತಿ: ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್
ಅತ್ಯಂತ ಮೌಲ್ಯಯುತ ಆಟಗಾರ: ಸೂರ್ಯಕುಮಾರ್ ಯಾದವ್ (ಎಂಐ) [320.5 ಎಂವಿಪಿ ಪಾಯಿಂಟ್ಗಳು]
ಆರೆಂಜ್ ಕ್ಯಾಪ್ ವಿಜೇತ: ಬಿ ಸಾಯಿ ಸುದರ್ಶನ್ (ಜಿಟಿ) [759 ರನ್ಗಳು]
ಪರ್ಪಲ್ ಕ್ಯಾಪ್ ವಿಜೇತ: ಪ್ರಸಿದ್ಧ್ ಕೃಷ್ಣ (ಜಿಟಿ) [25 ವಿಕೆಟ್ಗಳು]
ಫೈರ್ ಪ್ಲೇ ಅವಾರ್ಡ್: ಚೆನ್ನೈ ಸೂಪರ್ ಕಿಂಗ್ಸ್
ಅತ್ಯುತ್ತಮ ಕ್ಯಾಚ್: ಕಮಿಂದು ಮೆಂಡಿಸ್ (ಎಸ್ಆರ್ಹೆಚ್) [ಸಿಎಸ್ಕೆ ವಿರುದ್ಧ ಡೆವಾಲ್ಡ್ ಬ್ರೆವಿಸ್ ಅವರನ್ನು ಔಟ್ ಮಾಡಿದರು]
ಅತಿ ಹೆಚ್ಚು ಡಾಟ್ ಬಾಲ್ ಮಾಡಿದ ಬೌಲರ್: ಮೊಹಮ್ಮದ್ ಸಿರಾಜ್ (ಜಿಟಿ) [151 ಡಾಟ್ಗಳು]
ಅತಿ ಹೆಚ್ಚು ಬೌಂಡರಿಗಳು: ಬಿ ಸಾಯಿ ಸುದರ್ಶನ್ (ಜಿಟಿ) [88 ಬೌಂಡರಿಗಳು]
ಅತಿ ಹೆಚ್ಚು ಸಿಕ್ಸರ್ಗಳು: ನಿಕೋಲಸ್ ಪೂರನ್ (ಎಲ್ಎಸ್ಜಿ) [40 ಸಿಕ್ಸ್ಗಳು]
ಅತಿ ಹೆಚ್ಚು ಫ್ಯಾಂಟಸಿ ಪಾಯಿಂಟ್ಗಳು: ಬಿ ಸಾಯಿ ಸುದರ್ಶನ್ (ಜಿಟಿ) [1495 ಅಂಕಗಳು]
ಸೂಪರ್ ಸ್ಟ್ರೈಕರ್: ವೈಭವ್ ಸೂರ್ಯವಂಶಿ (ಆರ್ಆರ್) [ಸ್ಟ್ರೈಕ್ ರೇಟ್: 207]
ಉದಯೋನ್ಮುಖ ಆಟಗಾರ: ಬಿ ಸಾಯಿ ಸುದರ್ಶನ್ (ಜಿಟಿ)