ವಾಷಿಂಗ್ಟನ್: ತಮ್ಮ ಬೆಂಬಲವಿಲ್ಲದೇ ಇರುತ್ತಿದ್ದರೆ ಡೊನಾಲ್ಡ್ ಟ್ರಂಪ್ ( Donald Trump) ಅವರು 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ( 2024 presidential election ) ಸೋಲುತ್ತಿದ್ದರು ಮತ್ತು ಡೆಮೋಕ್ರಟಿಕ್ ಪಕ್ಷದ (Democratic party) ಪ್ರತಿನಿಧಿಗಳು ಸದನದ ಮೇಲೆ ಹಿಡಿತ ಸಾಧಿಸುತ್ತಿದ್ದರು ಎಂದು ಟೆಸ್ಲಾ ಸಿಇಒ (Tesla CEO) ಎಲಾನ್ ಮಸ್ಕ್ (Elon musk) ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ತೆಗೆದುಹಾಕಿರುವುದಕ್ಕೆ ಮಸ್ಕ್ ಅಸಮಾಧಾನಗೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದ ಬಳಿಕ ಇದಕ್ಕೆ ಪ್ರತಿಯಾಗಿ ಎಲಾನ್ ಮಸ್ಕ್ ಈ ಹೇಳಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಸಬ್ಸಿಡಿಗಳನ್ನು ತೆಗೆದುಹಾಕಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ ಎಂದು ಆರೋಪಿಸಿರುವುದಕ್ಕೆ ಪ್ರತಿಯಾಗಿ ಮಾತನಾಡಿರುವ ಎಲಾನ್ ಮಸ್ಕ್, ತಮ್ಮ ಬೆಂಬಲವಿಲ್ಲದೆ ಇದ್ದಿದ್ದರೆ ಡೊನಾಲ್ಡ್ ಟ್ರಂಪ್ 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುತ್ತಿದ್ದರು. ಯಾಕೆಂದರೆ ಶಾಸಕಾಂಗ ಮಸೂದೆಯ ಬಗ್ಗೆ ಎರಡೂ ಪಕ್ಷಗಳ ನಾಯಕರು ವಾಗ್ವಾದ ನಡೆಸಿದರು. ಅಂತಹ ಸನ್ನಿವೇಶದಲ್ಲಿ ಡೆಮೋಕ್ರಾಟ್ ಪ್ರತಿನಿಧಿಗಳ ಸದನದ ಮೇಲೆ ಹಿಡಿತ ಸಾಧಿಸುತ್ತಿದ್ದರು. ಆಗ ರಿಪಬ್ಲಿಕನ್ನರು ಸೆನೆಟ್ನಲ್ಲಿ 51- 49ರಷ್ಟು ಕಡಿಮೆ ಬಹುಮತವನ್ನು ಪಡೆಯುತ್ತಿದ್ದರು ಎಂದು ಹೇಳಿದರು.
🚨 NEW: Trump speaks on Elon coming out against the BBB
“I would have won Pennsylvania regardless of Elon…I’m very disappointed with Elon. He knew this bill better than anyone and he only developed a problem when he found out I would cut the EV mandate…
When he left he said… pic.twitter.com/O0OfkqmOUd
— Autism Capital 🧩 (@AutismCapital) June 5, 2025
ನಾಸಾವನ್ನು ಮುನ್ನಡೆಸಲು ತಮ್ಮ ನಾಮನಿರ್ದೇಶಿತರನ್ನು ಟ್ರಂಪ್ ಆಡಳಿತವು ತಿರಸ್ಕರಿಸಿದ ಅನಂತರ ಮಸ್ಕ್ ಅಸಮಾಧಾನಗೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದು, ಇಬ್ಬರ ನಡುವೆ ಉದ್ವಿಗ್ನತೆಯನ್ನು ಉಂಟು ಮಾಡಿದೆ ಎನ್ನಲಾಗಿದೆ. ಈ ನಡುವೆಯೇ ಎಲಾನ್ ಮಸ್ಕ್ ಈ ಹೇಳಿಕೆ ನೀಡಿದ್ದಾರೆ. ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ನಿಮಗೆ ಗೊತ್ತಾ ನಾನು ಯಾವಾಗಲೂ ಎಲಾನ್ ಅವರನ್ನು ಇಷ್ಟಪಟ್ಟಿದ್ದೇನೆ. ಮಸೂದೆಗಿಂತ ಹೆಚ್ಚು ಅವರು ನನ್ನನ್ನು ಟೀಕಿಸಬೇಕೆಂದು ಬಯಸುತ್ತೇನೆ. ಯಾಕೆಂದರೆ ಈ ಮಸೂದೆ ಅದ್ಭುತವಾಗಿದೆ ಎಂದಿದ್ದಾರೆ.
ನಾವು ಎಲೆಕ್ಟ್ರಾನಿಕ್ ವಾಹನಗಳ ಸಬ್ಸಿಡಿ ಹಿಂಪಡೆಯುವ ಆದೇಶವನ್ನು ತೆಗೆದುಕೊಂಡಿದ್ದರಿಂದ ಎಲಾನ್ ಅಸಮಾಧಾನಗೊಂಡಿದ್ದಾರೆ. ಎಲೆಕ್ಟ್ರಾನಿಕ್ ವಾಹನಗಳಿಗೆ ನೀಡುವ ಸಬ್ಸಿಡಿಗಾಗಿ ಸಾಕಷ್ಟು ಹಣ ವ್ಯಯವಾಗುತ್ತದೆ. ನಮಗೆ ಗೊತ್ತು ಅವರು ಕಷ್ಟಪಡುತ್ತಿದ್ದಾರೆ. ವಿದ್ಯುತ್ ವಾಹನಗಳಿಗಾಗಿ ನಾವು ಅವರಿಗೆ ಶತಕೋಟಿ ಡಾಲರ್ ಸಬ್ಸಿಡಿಯನ್ನು ಪಾವತಿಸಬೇಕೆಂದು ಬಯಸುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.
Whatever.
Keep the EV/solar incentive cuts in the bill, even though no oil & gas subsidies are touched (very unfair!!), but ditch the MOUNTAIN of DISGUSTING PORK in the bill.
In the entire history of civilization, there has never been legislation that both big and beautiful.…
— Elon Musk (@elonmusk) June 5, 2025
ಇದನ್ನೂ ಓದಿ: Bengaluru Stampede: ಬೆಂಗಳೂರು ಕಾಲ್ತುಳಿತ ದುರಂತ; RCB ಮ್ಯಾನೇಜ್ಮೆಂಟ್ನ ಇಬ್ಬರ ಬಂಧನ
ವಿದ್ಯುತ್ ವಾಹನಗಳ ಮಸೂದೆಯಲ್ಲಿ ತೆರಿಗೆ ವಿನಾಯಿತಿಗಳನ್ನು ತೆಗೆದುಹಾಕುವುದನ್ನು ಉಲ್ಲೇಖಿಸುತ್ತಾ ಟ್ರಂಪ್, ಎಲಾನ್ ಗೆ ಇದು ಮೊದಲೇ ತಿಳಿದಿತ್ತು. ಅವರು ಅದನ್ನು ಬಹಳ ಹಿಂದೆಯೇ ತಿಳಿದಿದ್ದರು ಎಂದಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಮಸ್ಕ್, ಏನೇ ಇರಲಿ ಎಂದು ಹೇಳಿದ್ದಾರೆ. ಅಲ್ಲದೇ ಯಾವುದೇ ತೈಲ ಮತ್ತು ಅನಿಲಗಳಿಗೆ ಸಬ್ಸಿಡಿ ಸಿಗದಿದ್ದರೆ ಅದು ತುಂಬಾ ಅನ್ಯಾಯ. ವಿದ್ಯುತ್, ಸೌರಶಕ್ತಿ ಪ್ರೋತ್ಸಾಹ ಕಡಿತವನ್ನು ಮಸೂದೆಯಲ್ಲಿ ಇರಿಸಿ. ಆದರೆ ಮಸೂದೆಯಲ್ಲಿ ಅಸಹ್ಯಕರ ಹಂದಿಮಾಂಸವನ್ನು ಬಿಡಿ. ನಾಗರಿಕತೆಯ ಸಂಪೂರ್ಣ ಇತಿಹಾಸದಲ್ಲಿ ದೊಡ್ಡ ಮತ್ತು ಸುಂದರವಾದ ಎರಡೂ ಕಾನೂನುಗಳು ಎಂದಿಗೂ ಇರಲಿಲ್ಲ. ಇದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿ ದೊಡ್ಡ ಕೊಳಕು ಮಸೂದೆ ಅಥವಾ ತೆಳ್ಳಗಿರುವ ಸುಂದರವಾದ ಮಸೂದೆ ಹೀಗೆ ಎರಡು ಆಯ್ಕೆಗಳಿದ್ದಾಗ ತೆಳ್ಳಗೆ ಮತ್ತು ಸುಂದರವಾಗಿರುವುದನ್ನು ಪಡೆಯುವುದು ಸರಿಯಾದ ದಾರಿ ಎಂದು ಅವರು ಹೇಳಿದ್ದಾರೆ.