ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಶ್ವವಿದ್ಯಾಲಯದ ಉದ್ದೇಶ ಈಡೇರಬೇಕಾದರೆ ಪರಿಣಾಮಕಾರಿ ಬೋಧನೆ ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆಯಿಂದ ಮಾತ್ರ ಸಾಧ್ಯ ಈ ಕರ್ತವ್ಯಕ್ಕೆ ನಿಯೋಜನೆಗೊಳ್ಳುವವರು ವೃತ್ತಿಬದ್ಧತೆ ಪ್ರದರ್ಶನ ಮಾಡಿದಾಗ ಮಾತ್ರ ವಿಶ್ವವಿದ್ಯಾಲಯಕ್ಕೆ ಹೆಸರು ಬರಲಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲ ಸಚಿವ ಡಾಕ್ಟರ್ ಲೋಕನಾಥ್ ಅಭಿಪ್ರಾಯ ಪಟ್ಟರು
ನಗರದ ಎಂ.ಜಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ನಾಲ್ಕು ಆರನೇ ಸೆಮಿಸ್ಟರ್ ಸ್ನಾತಕ ಪದವಿ ಪರೀಕ್ಷೆಗಳಿಗೆ ನಿಯೋಜನೆಗೊಂಡಿರುವ ವಿಚಕ್ಷಣ ಜಾಗೃತ ದಳ ಸಿಬ್ಬಂದಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣದ ಮೌಲ್ಯ ಕುಸಿತವಾಗಲು ಹಲವಾರು ಕಾರಣಗಳನ್ನು ಪಟ್ಟಿ ಮಾಡಬಹುದು. ಅವುಗಳಲ್ಲಿ ಪ್ರಧಾನವಾಗಿ ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನಕ್ಕೆ ಹೆಚ್ಚಿನ ಪ್ರಶಸ್ತವಿದೆ. ಈ ಎರಡು ಸುಧಾರಣೆಯಾದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ತಾನಾಗಿಯೇ ಸುಧಾರಣೆಯಾಗಲಿದೆ ಎಂದರು
ಇದನ್ನೂ ಓದಿ: Bakrid at Chikkaballapur: ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾಭಕ್ತಿಯಿಂದ ಬಕ್ರೀದ್ ಆಚರಣೆ
ಪರೀಕ್ಷಾ ಕಾರ್ಯಗಳಿಗೆ ನಿಯೋಜನೆಗೊಳ್ಳುವ ವಿಚಾರದಳದ ಸಿಬ್ಬಂದಿಗೆ ನೀಡುತ್ತಿರುವ ಗೌರವ ದನ ಕಡಿಮೆ ಇರಬಹುದು .ಆದರೆ ಉಪಕುಲಪತಿಯ ಅಧಿಕಾರದಂತೆ ನಿಮ್ಮ ಕರ್ತವ್ಯವಿರಲಿದೆ. ಹಣಕ್ಕಾಗಿ ಕಾರ್ಯನಿರ್ವಹಿಸದೆ ಗುಣಮಟ್ಟ ಸುಧಾರಣೆಗೆ ಕಟಿಬದ್ಧರಾಗಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ನಕಲು ಎಂಬ ಕೆಟ್ಟ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತುಹಾಕಲು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಪಣತೊಟ್ಟಿದೆ. ಈ ದಿಸೆಯಲ್ಲಿ ವಿಚಕ್ಷಣ ಜಾಗೃತ ದಳದ ಸಿಬ್ಬಂದಿಗೆ ಪರೀಕ್ಷೆ ಪ್ರಾರಂ ಭಕ್ಕೆ ಪೂರ್ವದಲ್ಲಿ ತರಬೇತಿ ನೀಡುವುದರೊಂದಿಗೆ ಈ ಕಾರ್ಯವನ್ನು ಪರಿಪೂರ್ಣ ಗೊಳಿಸಲು ನಾವು ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ತಾವು ನಿಮ್ಮ ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕತೆ ಯಿಂದ ನಿರ್ವಹಿಸಬೇಕು. ಪರೀಕ್ಷಾ ಕಾರ್ಯಗಳಲ್ಲಿ ಸಮಯ ಪಾಲನೆ ಬಹಳ ಮುಖ್ಯ. ಪರೀಕ್ಷಾ ಅವಧಿಯಲ್ಲಿ ಬೇರೆ ಯಾವ ಕೆಲಸವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಪರೀಕ್ಷಾ ಕಾರ್ಯದ ಕಡೆ ಗಮನಹರಿಸಬೇಕು. ಆಗ ಮಾತ್ರ ಇಲ್ಲಿನ ಅವ್ಯವಸ್ಥೆಯನ್ನು ಸುವ್ಯವಸ್ಥೆಗೆ ತರಲು ಸಾಧ್ಯ ಎಂದರು.
ಈ ವೇಳೆ ರಿಚಕ್ಷಣ ಜಾಗೃತದಳದ ಮುಖ್ಯಸ್ಥ ಡಾಕ್ಟರ್ ವಿನಯ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಸುಂದರ ಮತ್ತಿತರರು ಇದ್ದರು.