ನವದೆಹಲಿ: ಜೂನ್ 7ರಂದು ವಿಜಯ್ ಮಲ್ಯ (Vijay Mallya) ತಮ್ಮ ಎಕ್ಸ್ ಖಾತೆಯಿಂದ ಹಾಟ್ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ (Sabeer Bhatia) ಅವರ ಇನ್ಸ್ಟಾಗ್ರಾಮ್ (Instagram) ಪೋಸ್ಟ್ಗೆ ಲಿಂಕ್ ಹಂಚಿಕೊಂಡಿದ್ದರು. ಆದರೆ, ಈ ಲಿಂಕ್ ಕ್ಲಿಕ್ ಮಾಡಿದವರಿಗೆ “ಇಂಡಿಯಾಫ್ಲಾಶ್ ಇನ್ಸ್ಟಾಗ್ರಾಮ್ಗೆ ಸೇರಿ” ಎಂಬ ಪಾಪ್-ಅಪ್ ಕಾಣಿಸಿತು. ‘ಇಂಡಿಯಾಫ್ಲಾಶ್’ ಲಿಂಕ್ನಲ್ಲಿ “ಭಾರತೀಯ ಮಹಿಳೆಯರು ಬರಿಗಾಲಿನಲ್ಲಿ ಕಾರು ಚಾಲನೆ ಮಾಡುವ ಫೋಟೋಗಳು ಮತ್ತು ವಿಡಿಯೋಗಳ” ಇನ್ಸ್ಟಾಗ್ರಾಮ್ ಖಾತೆ ತೆರೆಯಿತು. ಇದರಿಂದ ಇದು ಮಲ್ಯ ಅವರ ಸೀಕ್ರೆಟ್ ಇನ್ಸ್ಟಾಗ್ರಾಮ್ ಖಾತೆ ಇರಬಹುದೆಂದು ಜನರು ಶಂಕಿಸುತ್ತಿದ್ದಾರೆ
‘ಇಂಡಿಯಾಫ್ಲಾಶ್’ ಖಾತೆಯ ರಹಸ್ಯ
ಮಲ್ಯ ಹಂಚಿಕೊಂಡ ಲಿಂಕ್ನಿಂದ ತೆರೆದ @Indiaflash1812 ಖಾತೆಯನ್ನು ಮಲ್ಯ ಸೀಕ್ರೆಟ್ ಅಕೌಂಟ್ ಆಗಿ ಬಳಸುತ್ತಿದ್ದಾರೆ ಎಂಬ ಊಹೆಗೆ ಕಾರಣವಾಯಿತು. 2016ರಿಂದ ಸಕ್ರಿಯವಾಗಿರುವ ಈ ಖಾತೆಯಲ್ಲಿ 2,000ಕ್ಕೂ ಹೆಚ್ಚು ಭಾರತೀಯ ಮಹಿಳೆಯರು ಬರಿಗಾಲಿನಲ್ಲಿ ಕಾರು ಚಾಲನೆ ಮಾಡುವ ಫೋಟೋಗಳು ಮತ್ತು ವಿಡಿಯೊಗಳಿವೆ.
ಸಾಮಾಜಿಕ ಜಾಲತಾಣದಲ್ಲಿ ಟೀಕೆ
ಕಳೆದ ಎರಡು ದಿನಗಳಿಂದ, ಮಲ್ಯ ಹಂಚಿಕೊಂಡ ಲಿಂಕ್ನಿಂದ ‘Indiaflash1812’ ಪಾಪ್-ಅಪ್ ಕಾಣಿಸಿದ ಸ್ಕ್ರೀನ್ಶಾಟ್ಗಳನ್ನು ಹಲವು ಜನರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. “ಮಲ್ಯ ತನ್ನ ಸೀಕ್ರೆಟ್ ಖಾತೆಯನ್ನು ಆಕಸ್ಮಿಕವಾಗಿ ಬಹಿರಂಗಗೊಳಿಸಿದ್ದಾರೆ” ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ. “ಸೀಕ್ರೆಟ್ ಇನ್ಸ್ಟಾಗ್ರಾಮ್ ಖಾತೆಯಿದ್ದರೆ, ಕ್ಲೀನ್ ಲಿಂಕ್ ಕಳಿಸಿ, ಇಲ್ಲವೇ ಗೌಪ್ಯತೆ ಬಯಲಾಗಬಹುದು” ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. “ಕಾರಿನಲ್ಲಿ ಕಾಲು? ಇದೊಂತರಾ ವಿಶೇಷ ಫೆಟಿಶ್” ಎಂದು ಇನ್ನೊಬ್ಬರು ಲೇವಡಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Vijay Mallya: ನಾನು ಕಳ್ಳ ಅಲ್ಲ… ಆರೋಪಗಳಿಗೆ ಪಾಡ್ಕಾಸ್ಟ್ನಲ್ಲಿ ವಿಜಯ್ ಮಲ್ಯ ಉತ್ತರ
ನೆಟಿಜನ್ಗಳ ತನಿಖೆಯಲ್ಲಿ ‘Indiaflash’ ಖಾತೆಗೆ ಮಲ್ಯರೊಂದಿಗಿನ ಇತರ ಸಂಪರ್ಕಗಳು ಕಂಡುಬಂದಿವೆ. 2017ರಲ್ಲಿ F1 ರೇಸರ್ ಸೆರ್ಗಿಯೋ ಪೆರೆಜ್, ಮಲ್ಯ ಜೊತೆಗಿನ ಫೋಟೋವನ್ನು ‘Indiaflash’ ಖಾತೆಯನ್ನು ಟ್ಯಾಗ್ ಮಾಡಿ ಹಂಚಿಕೊಂಡಿದ್ದರು. 2018ರಲ್ಲಿ ‘f1humor_official’ ಖಾತೆಯೂ ಮಲ್ಯರ ಪೋಸ್ಟ್ನಲ್ಲಿ ಈ ಖಾತೆಯನ್ನು ಟ್ಯಾಗ್ ಮಾಡಿತ್ತು. ‘Indiaflash1812’ ಹೆಸರಿನ 18.12 ಎಂಬ ಸಂಖ್ಯೆ, ಮಲ್ಯರ ಜನ್ಮದಿನ 18.12.1955ಗೆ ಹೊಂದಿಕೆಯಾಗುತ್ತದೆ ಎಂದು ಹಲವರು ಹೇಳಿದ್ದಾರೆ.
ವಿಜಯ್ ಮಲ್ಯ ಅಧಿಕೃತವಾಗಿ ‘@vijaymallyaofficial’ ಖಾತೆಯಲ್ಲಿ ಇನ್ಸ್ಟಾಗ್ರಾಮ್ನಲ್ಲಿದ್ದಾರೆ. 1.45 ಲಕ್ಷ ಫಾಲೋವರ್ಸ್ ಹೊಂದಿರುವ ಈ ಖಾತೆಯ ಬಯೋದಲ್ಲಿ “ಮಾಜಿ ಸಂಸದ, UB ಗ್ರೂಪ್ ಅಧ್ಯಕ್ಷ, ಕ್ರೀಡಾಪ್ರಿಯ, ಫಾರ್ಮುಲಾ ಒನ್ ತಂಡದ ಮಾಜಿ ಮುಖ್ಯಸ್ಥ, ಯುವ ಸಬಲೀಕರಣದ ಚಾಂಪಿಯನ್” ಎಂದು ಉಲ್ಲೇಖಿಸಲಾಗಿದೆ.