ಡೆಹ್ರಾಡೂನ್: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪಾರ್ಟಿ ಪಬ್ಗೆ ಹೋಗಿ ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ತೇಲಾಡುತ್ತಾ ರಂಪಾಟ ಮಾಡಿದ ಹಲವಾರು ವಿಡಿಯೊಗಳು ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದೀಗ ಡೆಹ್ರಾಡೂನ್ನ ರಾಯ್ಪುರದ ಜನನಿಬಿಡ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಮಹಿಳೆಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಮಹಿಳೆ ನಡುರಸ್ತೆಯಲ್ಲಿ ಕುಳಿತಿದ್ದರಿಂದ ವಾಹನ ಸಂಚಾರಕ್ಕೆ ತಡೆಯಾಗಿದೆಯಂತೆ.
ವೈರಲ್ ಆದ ವಿಡಿಯೊದಲ್ಲಿ, ಕಪ್ಪು ಬಣ್ಣದ ಸ್ಲಿವ್ಲೆಸ್ ಟಾಪ್ ಮತ್ತು ಡೆನಿಮ್ ಧರಿಸಿದ ಮಹಿಳೆಯೊಬ್ಬಳು ರಸ್ತೆಯ ಮಧ್ಯದಲ್ಲಿ ಕುಳಿತು ಹೈಡ್ರಾಮಾ ಮಾಡಿದ್ದಾಳೆ. ಮಹಿಳೆ ನಡುರಸ್ತೆಯಲ್ಲಿ ಕುಳಿತ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿದೆಯಂತೆ. ಆದರೂ ಮಹಿಳೆ ಅಲ್ಲಿಂದ ಕದಲಲಿಲ್ಲ. ಕೊನೆಗೆ ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ಕೆಲವು ಪುರುಷರು ಆಕೆಯನ್ನು ರಸ್ತೆಬದಿಯ ಕಡೆಗೆ ಎಳೆದು ತಂದಿದ್ದಾರಂತೆ. ಈ ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ವಿಷಯದಲ್ಲಿ ಪೊಲೀಸ್ ಕ್ರಮ ಕೈಗೊಂಡಿರುವ ಬಗ್ಗೆ ಯಾವುದೇ ವರದಿಗಳಿಲ್ಲ.
ವಿಡಿಯೊ ಇದೆ ನೋಡಿ…
देहरादून, रायपुर। बीच सड़क पर नशे की हालत में धुत लड़की सड़क में बैठकर ट्रैफिक को बाधित करना न केवल खुद के लिए खतरनाक है, बल्कि दूसरों की जान को भी जोखिम में डालता है#Dehradun #Uttarakhand pic.twitter.com/gbb53xsjeG
— Pyara Uttarakhand प्यारा उत्तराखंड (@PyaraUKofficial) June 8, 2025