ಪಣಜಿ: ಇತ್ತೀಚೆಗೆ ಆಸ್ಟ್ರೇಲಿಯನ್ ಕಂಟೆಂಟ್ ಕ್ರಿಯೆಟರ್ ಒಬ್ಬ ಬೀಚ್ನಲ್ಲಿ ಬಿರಿಯಾನಿ ತಿನ್ನುವಾಗ ಹಸುವೊಂದು ಅವನ ಬಿರಿಯಾನಿಯನ್ನು ಟೇಸ್ಟ್ ಮಾಡಲು ಮುಂದಾಗಿದೆಯಂತೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ತಮಾಷೆಯ ವಿಡಿಯೊ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.ವೈರಲ್(Viral Video) ಆದ ವಿಡಿಯೊದಲ್ಲಿ ಆಸ್ಟ್ರೇಲಿಯಾದ ಕಂಟೆಂಟ್ ಕ್ರಿಯೇಟರ್ ಬಳಿಗೆ ಹಸಿದ ಸ್ಥಳೀಯ ಹಸುವೊಂದು ಅನಿರೀಕ್ಷಿತವಾಗಿ ಭೇಟಿ ನೀಡುವುದನ್ನು ಸೆರೆಹಿಡಿಯಲಾಗಿದೆ.
ಆಸ್ಟ್ರೇಲಿಯನ್ ಕಂಟೆಂಟ್ ಕ್ರಿಯೇಟರ್ ಗೋವಾ ಬೀಚ್ನಲ್ಲಿ ಕೈಯಲ್ಲಿ ಒಂದು ಬಟ್ಟಲು ಬಿರಿಯಾನಿ ಹಿಡಿದು ಸಮುದ್ರದ ದಡದಲ್ಲಿರುವಾಗ, ಅನಿರೀಕ್ಷಿತವಾಗಿ ಬಂದ ಹಸುವೊಂದು ಅವನ ಕೈಯಲ್ಲಿದ್ದ ತಟ್ಟೆಯಿಂದ ಆಹಾರವನ್ನು ಕದ್ದು ತಿನ್ನಲು ಪ್ರಯತ್ನಿಸಿದೆಯಂತೆ.ಇವನು ಇದನ್ನು ನೋಡಿದ್ದರಿಂದ ಬಿರಿಯಾನಿ ಹಸುವಿನ ಪಾಲಾಗುವುದು ತಪ್ಪಿತಂತೆ. ಅದು ಅಲ್ಲದೇ ಆ ಹಸುವಿನ ಹಿಂದೆ ಇನ್ನೂ ಸಾಕಷ್ಟು ಹಸುಗಳು ಇದ್ದಿದ್ದು ನೋಡಿ ಆತ ಶಾಕ್ ಆಗಿದ್ದಾನಂತೆ.
ವಿಡಿಯೊ ಇಲ್ಲಿದೆ ನೋಡಿ…