ಲಂಡನ್: ಬಹುನಿರೀಕ್ಷಿತ ಮೂರನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (WTC 2025 Final) ಫೈನಲ್ ಪಂದ್ಯ ಜೂನ್ 11 ರಂದು ಬುಧವಾರ ಇಲ್ಲಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮಹತ್ವದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ತೆಂಬಾ ಬವೂಮ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡಗಳು (AUS vs SA) ಕಾದಾಟ ನಡೆಸಲಿವೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡದ ಪ್ಲೇಯಿಂಗ್ xi (SA Playing XI) ಅನ್ನು ಜೂನ್ 10 ರಂದು ಮಂಗಳವಾರ ಪ್ರಕಟಿಸಲಾಗಿದೆ. ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದಿದ್ದ ಅದೇ ಆಟಗಾರರನ್ನು ನಾಯಕ ತೆಂಬಾ ಬವೂಮ ಉಳಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ಇನ್ಫಾರ್ಮ್ ಬ್ಯಾಟ್ಸ್ಮನ್ಗಳಾದ ತೆಂಬಾ ಬವೂಮ ಹಾಗೂ ಏಡೆನ್ ಮಾರ್ಕ್ರಮ್ ಇನಿಂಗ್ಸ್ ಆರಂಭಿಸಬಹುದು. 2025ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ಪರ ಏಡೆನ್ ಮಾರ್ಕ್ರಮ್ ಉತ್ತಮ ಪ್ರದರ್ಶನವನ್ನು ತೋರಿದ್ದರು. ಇದೀಗ ವೈಟ್ಬಾಲ್ ಫಾರ್ಮ್ ಅನ್ನು ರೆಡ್ ಬಾಲ್ ಸ್ವರೂಪದಲ್ಲಿ ತರಬೇಕಾಗಿದೆ. ರಯಾನ್ ರಿಕೆಲ್ಟನ್ ಹಾಗೂ ಕೈಬ್ ವೆರೆನ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದಾರೆ. ಇವರು ತಮ್ಮ-ತಮ್ಮ ಕ್ರಮಾಂಕಗಳಲ್ಲಿ ಆಡಲಿದ್ದಾರೆ.
ICC WTC Final 2025: ವಿಶ್ವ ಟೆಸ್ಟ್ ಫೈನಲ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ
ಇನ್ನು ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸಟ್ಬ್ಸ್ ಹಾಗೂ ಡೇವಿಡ್ ಬೆಡಿಂಗ್ಹ್ಯಾಮ್ ಆಡಲಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ನಿಯಮಿತವಾಗಿ ಉತ್ತಮ ಪ್ರದರ್ಶನವನ್ನು ತೋರುತಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ ಹಾಗೂ ಮಾರ್ಕೊ ಯೆನ್ಸನ್ ಅವರು ಆಡಲಿದ್ದಾರೆ. ಇವರಿಗೆ ಲುಂಗಿ ಎನ್ಗಿಡಿ ಸಾಥ್ ನೀಡಲಿದ್ದಾರೆ. ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕೇಶವ್ ಮಹಾರಾಜ್ ಕಾಣಿಸಿಕೊಳ್ಳಲಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ದಕ್ಷಿಣ ಆಫ್ರಿಕಾ ಪ್ಲೇಯಿಂಗ್ XI
ಏಡೆನ್ ಮಾರ್ಕ್ರಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ತೆಂಬಾ ಬವೂಮ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರಿನ್ (ವಿ.ಕೀ), ಮಾರ್ಕೊ ಯೆನ್ಸನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ