
ಧಾರವಾಡ ಜೂನ್ 19:* 2025-26 ನೇ ಸಾಲಿನಲ್ಲಿ ಗ್ರಾಮೀಣ ಯುವ ಜನತೆಯು ಆರೋಗ್ಯಕರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಾಯಕವಾಗುವ ವಾತಾವರಣವನ್ನು ಸೃಜಿಸಲು ಯುವ ಚೈತನ್ಯ ಕಾರ್ಯಕ್ರಮದಡಿ ಜಿಲ್ಲೆಯ ಆಯ್ದ ಕ್ರೀಯಾಶೀಲವುಳ್ಳ ಸಕ್ರೀಯವಾಗಿರುವ ಯುವಕ ಸಂಘಗಳಿಗೆ ಕ್ರೀಡಾ ಕಿಟ್ಗಳನ್ನು ಸರಬರಾಜು ಮಾಡಲು ಉದ್ದೇಶಿಸಲಾಗಿದೆ.

2024-25 ನೇ ಸಾಲಿನಲ್ಲಿ ಆಯೋಜಿಸಿದ ಕ್ರೀಡಾಕೂಟ, ಕಾರ್ಯಚಟುವಟಿಕೆ, ಸಮಾಜ ಸೇವೆ ಹಾಗೂ ಇನ್ನಿತರ ಚಟುವಟಿಕೆಗಳ ಮಾಹಿತಿಯನ್ನು ಕಚೇರಿಗೆ ಜುಲೈ 18, 2025 ರೊಳಗಾಗಿ ಸಲ್ಲಿಸಬೇಕು. ಅದರಂತೆ ಸದರಿ ಯುವಕ ಸಂಘವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದ ಹಾಗೂ ಕ್ರೀಯಾಶೀಲವುಳ್ಳ ಸಂಘವಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2447424 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.