
ಜೂನ್ 19: ಧಾರವಾಡ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆಯುಷ್ ಇಲಾಖೆಯಿಂದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21, 2025 ರಂದು ಬೆಳಗ್ಗೆ 6.30 ಗಂಟೆಯಿಂದ 8 ಗಂಟೆಯವರೆಗೆ ಡಾ.ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಉಚಿತಯೋಗಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಯೋಗಾಭ್ಯಾಸದ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದು, ಒತ್ತಡ ನಿರ್ವಹಣೆ ಇತ್ಯಾದಿ ಯೋಗಾಸನಗಳನ್ನು ಪ್ರಾತ್ಯಕ್ಷಿಕೆ ಮೂಲಕ ಹೇಳಿ ಕೊಡಲಾಗುವುದು. ಕಾರ್ಯಕ್ರಮದ ಪ್ರಯೋಜನವನ್ನು ಧಾರವಾಡ ನಗರದ ಎಲ್ಲ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯವರು, ಸರ್ಕಾರಿ ಇಲಾಖೆಯವರು ಪಡೆದುಕೊಳ್ಳಲು ಹಾಗೂ ಯೋಗಾಭ್ಯಾಸಕ್ಕೆ ಆಗಮಿಸುವಾಗ ಎಲ್ಲರೂ ಸರಳವಾದ ಉಡುಪು, ಯೋಗಾ ಮ್ಯಾಟ್ ಅಥವಾ ಜಮಖಾನ ತಮ್ಮ ಜೊತೆಯಲ್ಲಿ ತರಬೇಕು. ಕೊವಿಡ್-19 ಮಾರ್ಗ ಸೂಚಿಗಳ ಪಾಲನೆ ಹಾಗೂ ಕಾರ್ಯಕ್ರಮದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳ ಬೇಕಾಗಿರುವುದರಿಂದ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಜ್ವರ, ನೆಗಡಿ, ಕೆಮ್ಮು ಮತ್ತು ಇತರೇ ಖಾಯಿಲೆಯಿಂದ ಬಳಲುತ್ತಿರುವವರು ಹಾಗೂ 14 ವರ್ಷದೊಳಗಿನ ಮಕ್ಕಳು ಸದರಿ ಕಾರ್ಯಕ್ರಮಕ್ಕೆ ಬರದೇ ಇರಲು ಸಂಬಂಧಿಸಿದವರು ಕ್ರಮವಹಿಸಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.