ಲೀಡ್ಸ್: ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ(IND vs ENG) ದ್ವಿತೀಯ ಇನಿಂಗ್ಸ್ನಲ್ಲಿಯೂ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಲೀಡ್ಸ್ ಟೆಸ್ಟ್ನ ಎರಡೂ ಇನಿಂಗ್ಸ್ಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ರಿಷಭ್ ಪಂತ್ ಬರೆದಿದ್ದಾರೆ. ಆ ಮೂಲಕ ಜಿಂಬಾಬ್ವೆ ಮಾಜಿ ವಿಕೆಟ್ ಕೀಪರ್ ಆಂಡಿ ಫ್ಲವರ್ (Andy Flower) ಒಳಗೊಂಡ ಎಲೈಟ್ ಲಿಸ್ಟ್ಗೆ ರಿಷಭ್ ಪಂತ್ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಈ ಶತಕದ ಮೂಲಕ ಪಂತ್ ಇನ್ನು ಕೆಲ ದಾಖಲೆಗಳನ್ನು ಬರೆದಿದ್ದಾರೆ.