
ಧಾರವಾಡ: ಅಮೆರಿಕ ಹಾಗೂ ಇಸ್ರೇಲ್ ಸಾಮ್ರಾಜ್ಯಶಾಹಿಗಳಿಂದ ಇರಾನ್ ಹಾಗೂ ಪ್ಯಾಲೆಸ್ಟೈನ್ ಮೇಲಿನ ಬರ್ಬರ ಮಿಲಿಟರಿ ದಾಳಿ ಖಂಡಿಸಿ. ಎಸ್.ಯು.ಸಿ.ಐ(ಸಿ), ಸಿಪಿಐ(ಎಂ) ಹಾಗೂ ಸಿಪಿಐ ಪಕ್ಷಗಳಿಂದ ಇಂದು ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಅಮೆರಿಕನ್ ಸಾಮ್ರಾಜ್ಯಶಾಹಿಗಳು ಎಲ್ಲಾ ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ, ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)ಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ, ಶಾಂತಿಪ್ರಿಯ ಜಗತ್ತಿನ ಜನರ ಅಭಿಪ್ರಾಯವನ್ನು ತಿರಸ್ಕರಿಸಿ, ಇರಾನ್ ಮೇಲೆ ನಡೆಸಿರುವ ಬರ್ಬರ ಮಿಲಿಟರಿ ದಾಳಿಯನ್ನು ತೀವ್ರವಾಗಿ ಖಂಡಿಸಲಾಯಿತು. ಅದೇ ರೀತಿ ಪ್ಯಾಲಿಸ್ಟನ್ ಮೇಲೆ ಇಸ್ರೇಲ್ ದಾಳಿ ಮಾಡಿ ಅಲ್ಲಿನ ಸಾಮಾನ್ಯ ಜನ ಮಕ್ಕಳು ಮಹಿಳೆಯರೆನ್ನದೆ ಕೊಲೆ ಮಾಡಿದೆ. ಅಮೆರಿಕನ್ ಸಾಮ್ರಾಜ್ಯಶಾಹಿ ರಾಕ್ಷಸರು ಮೊದಲು ಮಧ್ಯಪ್ರಾಚ್ಯದಲ್ಲಿ ತಮ್ಮ ಮುಂಚೂಣಿ ಕಚೇರಿಯಾದ ಝಿಯೋನಿಸ್ಟ್ ಇಸ್ರೇಲ್ಗೆ ಸಹಾಯ ಮಾಡಿ, ಪ್ರಚೋದಿಸಿ, ಗಾಜಾದಲ್ಲಿ ಲಕ್ಷಾಂತರ ನಿರಪರಾಧಿಗಳಾದ ಪ್ಯಾಲೆಸ್ಟೀನಿಯರನ್ನು ಕೊಂದು ಸಾಮೂಹಿಕ ನರಮೇಧವನ್ನು ಆಯೋಜಿಸಿದರು.

ಈಗ ಇರಾನ್ ತಮ್ಮ ಆದೇಶಗಳಿಗೆ ಬಗ್ಗುವಂತೆ ಮಾಡಲು, ತಮ್ಮ ಪ್ರಾಬಲ್ಯವನ್ನು ವಿಸ್ತರಿಸಲು ಮತ್ತು ಮಧ್ಯಪ್ರಾಚ್ಯದಲ್ಲಿ ತಮ್ಮ ಹಿಡಿತ ಕಾಪಾಡಿಕೊಳ್ಳುವ ಯೋಜನೆಗೆ ಯಾವುದೇ ಸವಾಲು ಎದುರಾಗದಂತೆ ಖಾತ್ರಿಪಡಿಸಿಕೊಳ್ಳಲು, ಇರಾನ್ ಮೇಲೆ ಅಪ್ರಚೋದಿತವಾದ ಮಾರಕ ಮಿಲಿಟರಿ ದಾಳಿಯನ್ನು ಅಮೆರಿಕ ಆರಂಭಿಸಿದ್ದಾರೆ.ಇರಾನ್ ಜನರ ದಿಟ್ಟ ಪ್ರತಿರೋಧವು ಈ ಘೋರ ಷಡ್ಯಂತ್ರವನ್ನು ವಿಫಲಗೊಳಿಸುತ್ತಿದೆ. ಇಸ್ರೇಲ್ನ ಮಿಲಿಟರಿ ದಾಳಿಯಿಂದ ಇರಾನ್ನ್ನು ಸದೆಬಡಿಯಲು ವಿಫಲವಾದ ಅಮೆರಿಕ, ಈಗ ನೇರವಾಗಿ ಇರಾನ್ ಮೇಲೆ ದಾಳಿ ಮಾಡಿದೆ. ಯುಎಸ್ ಸಾಮ್ರಾಜ್ಯಶಾಹಿಗಳು ಈ ಬರ್ಬರ ಮಿಲಿಟರಿ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಲಾಯಿತು. ಈ ದಾಳಿಯು ಕೇವಲ ಇರಾನ್ ಮೇಲೆ ಮಾತ್ರವಲ್ಲ, ಇಡೀ ಮಾನವೀಯತೆ ಮತ್ತು ವಿಶ್ವ ಶಾಂತಿಯ ವಿರುದ್ಧವಾಗಿದೆ. ಯುಎಸ್ ಸಾಮ್ರಾಜ್ಯಶಾಹಿ ರಾಕ್ಷಸರ ಈ ಶಿಕ್ಷಾರ್ಹ ಆಕ್ರಮಣದ ವಿರುದ್ಧ ಒಗ್ಗಟ್ಟಾಗಿ ಪ್ರತಿಭಟನೆಯ ಧ್ವನಿಯನ್ನು ಎತ್ತಲು ವಿಶ್ವದ ಎಲ್ಲ ಶಾಂತಿಪ್ರಿಯ ಜನರಿಗೆ ಮನವಿ ಮಾಡಿದರು.