ಲಾರೆನ್ ಭಾರತದ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ʼಝಲಕ್ ದಿಕ್ಲಾಜಾʼದಲ್ಲಿ 2013ರಲ್ಲಿ ಭಾಗ ವಹಿಸಿ ರನ್ನರ್ ಅಪ್ ಆಗಿದ್ದರು. ಹಿಂದಿಯ ʼಎಬಿಸಿಡಿʼ ಸುಶಾಂತ್ ರಜಪೂತ್ ನಟಿಸಿದ್ದ ʼಡಿಟೆಕ್ಟಿವ್ ಬ್ಯೂಮಕೇಶ ಬಕ್ಷಿʼ, ವರುಣ್ ಧವನ್ ನಟನೆಯ ʼಎಬಿಸಿಡಿ 2ʼ, ಪಂಜಾಬಿ ಸಿನಿಮಾ ʼಅಂಬರಸರಿಯಾʼ, ನವಾಜುದ್ದೀನ್ ಸಿದ್ಧಿಕಿ ನಟನೆಯ ʼಗೂಮ್ಕೇತುʼ ಸಿನಿಮಾಗಳ ಹಾಡುಗಳಲ್ಲಿ ಸೊಂಟ ಬಳುಕಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.