ಬಿಗ್ ಬಾಸ್ಗೆ (Bigg Boss) ಹೋದು ಬಂದ ಬಳಿಕ ಅದೆಷ್ಟೊ ಕಲಾವಿದರ ಬದುಕು ಬದಲಾಗಿದೆ. ಹಿಂದೆ ಮೂಲೆಗುಂಪಾಗಿದ್ದ ಕೆಲ ಕಲಾವಿದರು ಈ ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಅವರ ಬದುಕು ಬಂಗಾರವಾಗಿದೆ. ಈ ಸಾಲಿನಲ್ಲಿ ಇಂದು ನಮಗೆ ಮುಂಚೂಣಿಯಲ್ಲಿ ಕಾಣುತ್ತಿರುವ ವ್ಯಕ್ತಿ ಎಂದರೆ ಅದು ಉಗ್ರಂ ಮಂಜು. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಮಂಜು, ತಮ್ಮದೇ ಮ್ಯಾನರಿಸಂ ಮೂಲಕ ಕರ್ನಾಟಕ ಜನತೆಗೆ ಇಷ್ಟವಾದವರು. ಆರಂಭದಲ್ಲಿ ಅಬ್ಬರಿಸುತ್ತಿದ್ದ ಮಂಜು ಬಳಿಕ ಗೌತಮಿ ಜಾಧವ್ ಜೊತೆ ಸೇರಿ ಸಂಪೂರ್ಣ ಬದಲಾದರು. ಕತ್ತಲೆಯಿಂದ ಬೆಳಕಿನೆಡೆಗೆ ಬಂದರು.
ಬಿಗ್ ಬಾಸ್ ಬರುವುದಕ್ಕೂ ಮುನ್ನ ಲೈಫ್ ಅನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಬೇಕಾಬಿಟ್ಟಿ ಹಣ ಖರ್ಚು, ಕುಡಿತದ ಚಟಕ್ಕೆ ಒಳಗಾಗಿದ್ದರು. ಇದನ್ನು ಸ್ವತಃ ಅವರೇ ದೊಡ್ಮನೆಯೊಳಗೆ ಹೇಳಿದ್ದರು. ಆದರೀಗ ಮಂಜು ಸಂಪೂರ್ಣವಾಗಿ ಬದಲಾಗಿದ್ದಾರೆ. ಬಿಗ್ ಬಾಸ್ನಿಂದ ಹೊರಬಂದ ಬಳಿಕ ಮಂಜು ಹೊಸ ಜೀವನ ಶುರುಮಾಡಿದ್ದಾರೆ. ಕುಡಿತದ ಚಟದಿಂದ ಎಲ್ಲ ಹೊರಬಂದಿದ್ದಾರೆ. ಇದಕ್ಕೆಲ್ಲ ಕಾರಣ ಗೌತಮಿ ಎಂಬ ಸತ್ಯವನ್ನು ಕೂಡ ಮಂಜಣ್ಣ ಹೇಳಿದ್ದಾರೆ.
Kannada Serial TRP: ನಂಬರ್ ಒನ್ ಸ್ಥಾನಕ್ಕೆ ಬಂದ ಹೊಸ ಧಾರಾವಾಹಿ: ಮಹಾನಟಿಗೆ ಎಷ್ಟು ಟಿಆರ್ಪಿ?
ಈಗ ನನ್ನ ಲೈಫ್ ಖಂಡಿತ ಬದಲಾವಣೆ ಆಗಿದೆ. ಮಾತಾಡೋ ರೀತಿ ಹೀಗೆ ಎಲ್ಲವೂ ಬದಲಾವಣೆ ಆಗಿದೆ. ಇದಕ್ಕೆಲ್ಲಾ ಗೌತಮಿಯೇ ಕಾರಣ. ಬಿಗ್ ಬಾಸ್ ಮನೆಯಲ್ಲಿ ಅದೊಂದು ಗೇಮ್ ಆಗಿತ್ತು, ಫ್ರೆಂಡ್ಶಿಪ್ ಇದ್ದರೂ ಆಟದ ಬಗ್ಗೆಯೂ ಗಮನ ಹರಿಸಬೇಕಿತ್ತು. ಆದರೆ ಈಗ ಆ ರೀತಿ ಇಲ್ಲ. ನಾನು, ಗೌತಮಿ ಮತ್ತು ಅವರ ಪತಿ ಅಭಿಷೇಕ್ ಕಾಸರಗೋಡು ಆಗಾಗ ಜಯನಗರದಲ್ಲಿ ಕಾಫಿಗೆ ಸಿಗ್ತೀವಿ, ಮಾತಾಡ್ತೀವಿ. ಒಬ್ಬರಿಗೊಬ್ಬರು ಏನ್ ಮಾಡ್ತಿದ್ದೀವಿ ಎಂಬುದನ್ನು ಹಂಚಿಕೊಳ್ಳುತ್ತೇವೆ. ಫ್ಯಾಮಿಲಿ ಬಗ್ಗೆಯೂ ಚರ್ಚೆ ಮಾಡುತ್ತೇವೆ. ನಮ್ಮ ನಡುವಿನ ಬಾಂಧವ್ಯ, ಫ್ರೆಂಡ್ಶಿಪ್, ಏನಿದೆಯೋ ಅದು ಮುಂದುವರಿಯುತ್ತಿದೆ” ಎಂದು ಹೇಳಿದ್ದಾರೆ.
ಮಂಜು ಅವರಿಗೆ ಸದ್ಯ ಸಿನಿಮಾದಲ್ಲಿ ಆಫರ್ಗಳು ಹುಡುಕಿ ಬರುತ್ತಿವೆ. ಅವರು ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೆ ಜೊತೆಗೆ ಇನ್ನೂ ಎರಡು ಮೂರು ಸಿನಿಮಾಗಳಲ್ಲಿ ಮಂಜು ಮುಖ್ಯ ಪಾತ್ರ ಮಾಡುತ್ತಿದ್ದಾರೆಂಬ ಸುದ್ದಿ ಇದೆ.