ಕೃಷಿ ವಿವಿಯಿಂದ ಎರಡು ಕಾಳು ಆಯ್ಕೆ ಮಾಡಿ ಕಳಿಸಿದ್ದೆವೆ,ಇಸ್ರೋ, ಕೃಷಿ ವಿವಿ ಹಾಗೂ ಧಾರವಾಡ ಐಐಟಿ ಸಹಯೋಗದೊಂದಿಗೆ ಇದನ್ನ ಕಳಿಸಲಾಗಿದೆ. ಬಾಹ್ಯಾಕಾಶಕ್ಕೆ ಹೋದವರೊಗೆ ಪೌಷ್ಟಿಕಾಂಶ ಸಿಗಲಿ ಎಂಬ ಉದ್ದೇಶದಿಂದ ಇದನ್ನ ಕಳಿಸಲಾಗಿದೆ ಎಂದರು.ಪ್ರತಿ ದಿನ ನಾವು ಉಪಯೋಗ ಮಾಡುವ ಕೊಸಂಬ್ರಿಯಲ್ಲಿ ಈ ಎರಡು ಕಾಳುಗಳನ್ನು ನಾವು ತೆಗೆದುಕೊಂಡು ಅಧ್ಯಯನ ಮಾಡುತಿದ್ದೆವೆ.ಹೆಸರು ಮತ್ತು ಮೆಂತೆ ಕಾಳು ಮನುಷ್ಯ ಆರೋಗ್ಯಕ್ಕೆ ಒಳ್ಳೆಯದು, ಇವುಗಳನ್ನ ಗಗನ ಯಾತ್ರೆಯಲ್ಲಿ -40 ಡಿಗ್ರಿಯಲ್ಲಿ ಬಾಹ್ಯಾಕಾಶದಲ್ಲಿ ಇಟ್ಟು ವಾಪಸ್ ಭೂಮಿಗೆ ತರಲಾಗುತ್ತದೆ. 16 ದಿನಗಳ ಬಳಿಕ ಭೂಮಿಗೆ ಇವರು ಬಂದಾಗ ಅವುಗಳ ಪೋಷಕಾಂಶ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ.ಅಲ್ಲದೆ ಗಗನ ಯಾತ್ರೆಯಲ್ಲಿ ಸೂಕ್ಷ್ಮಾಣು ಜೀವ ಈ ಕಾಳಿಗೆ ಏನಾದರು ಪರಿಣಾಮ ಆಗಿದೆಯೇ ಎಂದು ಪರೀಕ್ಷೆ ಮಾಡಲಾಗುತ್ತದೆ. ಮನುಷ್ಯನಿಗೆ ಆರೋಗ್ಯ ಮುಖ್ಯ, ಅದಕ್ಕೆ ಇದನ್ನ ಪರೀಕ್ಷೆ ಮಾಡಲಾಗುತ್ತದೆ. ಗಗನ ಯಾತ್ರೆಯಲ್ಲಿ ಬಾಹ್ಯಾಕಾಶಿಗಳು ಈ ಕಾಳು ಉಪಯೋಗ ಮಾಡಬಹುದಾ ಎಂದು ಪರೀಕ್ಷೆ ಮಾಡಲಾಗುತ್ತದೆ.ಇದು ನಮ್ಮ ವಿವಿ ವಿಜ್ಞಾನಿಗಳು ಪ್ರಯೋಗ ಮಾಡುತಿದ್ದಾರೆ. ಮೆಂತೆ ಕಾಳಿನಲ್ಲಿ ಔಷಧಿ ಗುಣಮಟ್ಟದಲ್ಲಿ ಹೆಚ್ಚು ಇರುತ್ತದೆ ಎಂದರು

.ಇನ್ನು ಸಕ್ಕರೆ ಖಾಯಿಲೆ ಹಾಗೂ ಕಿಡ್ನಿ ಸ್ಟೋನ್ ಇದ್ದವರು ಮೆಂತೆ ಕಾಳು ನೆನೆಸಿ ನೀರನ್ನ ಕುಡಿಯುತ್ತಾರೆ.ಕಾಳನ್ನ ಕೂಡಾ ಉಪಯೋಗ ಮಾಡ್ತಾರೆ.ಈ ರೀತಿ ಔಷಧಿ ಗುಣ ಮೆಂತೆ ಕಾಳೊನಲ್ಲಿ ಇವೆ,ಹೆಸರು ಕಾಳಿನಲ್ಲಿ ಪೌಷ್ಟಿಕತೆ ಇದೆ. ಆ ಹಿನ್ನೆಲೆ ಈ ಎರಡು ಕಾಳು ಕಳಿಸಿದ್ದೆವೆ,ಕಡಲೆ ಕಾಳನ್ನ ಕಳಿಸಬಹುದಿತ್ತು. ಆದರೆ ಅದು ಬಹಳ ಪೌಷ್ಟಿಕ ಪ್ರೊಟಿನ್ ನಾರ್ಮಲ್ ಇರುವ ಕಾಳನ್ನ ಕಳಿಸಿದ್ದೆವೆ ಎಂದು ಕೃಷಿ ವಿವಿಯಲ್ಲಿ ಕುಲಪತಿ ಪಿ ಎಲ್ ಪಾಟೀಲ ಹೇಳಿದ್ದಾರೆ…