*ಖ್ಯಾತ ತಬಲಾ ಶಿಕ್ಷಕರು,ರುದ್ರವೀಣಾ ವಾದಕರು ಹಾಗು ಸಂಗೀತ ಗುರುಗಳಿಗೆ ಸನ್ಮಾನದ ಗೌರವ*ಶಿರಸಿ: ಇಲ್ಲಿಯ ಎಂ ಎಂ ಕಲಾ ಮತ್ತು ವಿಜ್ಷಾನ ಮಹಾವಿದ್ಯಾಲಯದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಮತ್ತು ಸಂಗೀತ ಮತ್ತು ನೃತ್ಯ ವಿಭಾಗ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ನಡೆದ ಸಂಗೀತ ಕಲಿಸಿ ಮತ್ತು ಸಂಸ್ಕೃತ ಉಳಿಸಿ ಅಭಿಯಾನದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರುಸ್ಕೃತರು ಹಾಗೂ ಖ್ಯಾತ ತಬಲ ಶಿಕ್ಷಕರಾದ ಪ್ರೊ. ಸಂಜೀವ್ ಪೋತದಾರ್, ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ರುದ್ರವೀಣಾ ವಾದಕರಾದ ಪ್ರೊ. ರಾಮಚಂದ್ರ ಬಿ ಹೆಗಡೆ ಹಳ್ಳದಕೈ ಹಾಗೂ ಖ್ಯಾತ ಸಂಗೀತ ಗುರುಗಳಾದ ಡಾ. ಶೈಲಜಾ ಮಂಗಳೂರುಕರ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇವರಿಗೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ ಪರಮಶಿವಮೂರ್ತಿ,ವಿದ್ಯಾವಾಚಕ ವಿದ್ವಾನ್ ಉಮಾಕಾಂತ ಭಟ್ ಕೆರೆಕೈ,ಪ್ರಾಚಾರ್ಯ ಪ್ರೊ.ಜಿ ಟಿ ಭಟ್ ಸೇರಿದಂತೆ ವೇದಿಕೆಲಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು.
