ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮಹಿಳಾ ಟಿ20ಐ ಸರಣಿಯ(INDW vs ENGW) ಮೊದಲನೇ ಪಂದ್ಯದಲ್ಲಿ ಮುರಿಯದ ಮೊದಲನೇ ವಿಕೆಟ್ಗೆ ದೊಡ್ಡ ಜೊತೆಯಾಟವನ್ನು ಆಡುವ ಮೂಲಕ ಭಾರತ ತಂಡದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (Shafali Verma) ಹಾಗೂ ಸ್ಮೃತಿ ಮಂಧಾನಾ (Smriti Mandhana)ಮಹತ್ವದ ದಾಖಲೆಯನ್ನು ಬರೆದಿದ್ದಾರೆ. ಶನಿವಾರ ಇಲ್ಲಿನ ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡದ ಪರ ಸ್ಮೃತಿ ಮಂಧಾನಾ ಹಾಗೂ ಶಫಾಲಿ ವರ್ಮಾ ಜೋಡಿ ಮುರಿಯದ ಮೊದಲನೇ ವಿಕೆಟ್ಗೆ 77 ರನ್ಗಳನ್ನು ಜೊತೆಯಾಟವನ್ನು ಆಡಿತ್ತು.
ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನಾ ಟಿ20ಐ ಕ್ರಿಕೆಟ್ನಲ್ಲಿ ಮುರಿಯದ ಮೊದಲನೇ ವಿಕೆಟ್ಗೆ 21ನೇ ಬಾರಿ 50ಕ್ಕಿಂತ ಹೆಚ್ಚು ರನ್ಗಳ ಜೊತೆಯಾಟವನ್ನು ಆಡಿದೆ. ಆ ಮೂಲಕ 20 ಬಾರಿ 50ಕ್ಕೂ ಹೆಚ್ಚು ಬಾರಿ ಜೊತೆಯಾಟಗಳನ್ನು ಆಡಿದ್ದ ಆಸ್ಟ್ರೇಲಿಯಾದ ಅಲೀಸಾ ಹೀಲಿ ಹಾಗೂ ಬೆಥ್ ಮೂನಿ ಅವರ ದಾಖಲೆಯನ್ನು ಭಾರತದ ಜೋಡಿ ಮುರಿದಿದೆ. ಅಲ್ಲದೆ ಮಹಿಳಾ ಟಿ20ಐ ಕ್ರಿಕೆಟ್ನಲ್ಲಿ ಆರಂಭಿಕ ವಿಕೆಟ್ಗೆ ಅತಿ ಹೆಚ್ಚು ರನ್ ದಾಖಲಿಸಿದ ಮೊದಲ ಜೋಡಿ ಎಂಬ ವಿಶ್ವ ದಾಖಲೆಯನ್ನು ಮಂಧಾನಾ ಹಾಗೂ ಶಫಾಲಿ ಜೋಡಿ ಬರೆದಿದೆ. ಭಾರತದ ಈ ಜೋಡಿ 78 ಟಿ20ಐ ಇನಿಂಗ್ಸ್ಗಳಿಂದ 36.17ರ ಸರಾಸರಿಯಲ್ಲಿ ಮೂರು ಶತಕಗಳು ಹಾಗೂ 15 ಅರ್ಧಶತಕಗಳ ಮೂಲಕ 2713 ರನ್ಗಳನ್ನು ಬಾರಿಸಿದೆ.