
ಧಾರವಾಡ: ಜಿಲ್ಲಾಡಳಿತ ಹಾಗು ಮಹಾನಗರ ಪಾಲಿಕೆ ಆಶ್ರಯದಲ್ಲಿ ಧಾರವಾಡದಲ್ಲಿ ಒಂದು ಸ್ವಚ್ಛ ನಗರ ಶೀರ್ಷಿಕೆಯಡಿ ವಿಶೇಷ ಸ್ವಚ್ಚತಾ ಅಭಿಯಾನ ನಡೆಸಲಾಯಿತು.ಧಾರವಾಡದ ವಾರ್ಡ್ ನಂಬರ 3,ರ ಮರಾಠಾ ಕಾಲೊನಿ ಮುಖ್ಯ ರಸ್ತೆ ಹಾಗೂ ರಾಮನಗೌಡರ ಆಸ್ಪತ್ರೆಯಿಂದ ಮಾಳಾಪುರ ಬಸನಿಲ್ದಾಣವರೆಗೆ ಸ್ವಚ್ಚತಾ ಅಭಿಯಾನವನ್ನು ಕೈಗೊಳ್ಳಲಾಯಿತು. ವಿನೂತನ ನಮ್ಮ ನಗರ ಸ್ವಚ್ಛ ನಗರ ಕಾರ್ಯಕ್ರಮವನ್ನ ಮಾಜಿಮಹಾಪೌರ ಈರೇಶ ಅಂಚಟಗೇರಿ ಚಾಲನೆ ನೀಡಿ ಸ್ವಚ್ಛತಾ ಅಭಿಯಾನದಲ್ಲಿ ಕಾಲೇಜು ಮಕ್ಕಳೊಂದಿಗೆ ತಾವು ತೊಡಗಿಸಿಕೊಂಡು ಸಾರ್ವಜನಿಕರಲ್ಲಿ ಸ್ವಚ್ಚತೆಯ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಖ್ಯಾತ ವೈದ್ಯರು ಡಾ ಎಸ್ ಆರ್ ರಾಮನಗೌಡರ. ಮಹಾದೇವ ಕರಿಕಟ್ಟಿ. ವಲಯ ಅಧಿಕಾರಿಗಳು ಜಮಖಂಡಿ ಗಂಗಾಧರ ಮಧು ರಾಯ್ಕರ. ಸೇರಿದಂತೆ ಸ್ಥಳೀಯ ನಿವಾಸಿಗಳು ಪಾಲ್ಗೊಂಡು ಸ್ವಚ್ಚತಾ ಅಭಿಯಾನವನ್ನ ಯಶಸ್ವಿಗೊಳಿಸಿದರು
