ಶಿರಸಿ: ತಾಲೂಕಿನ ಮತ್ತಿಘಟ್ಟ ಸಮೀಪದ ಜೋಗನ ಹಕ್ಕಲು ಜಲಪಾತದಲ್ಲಿ ಜೂ.23ರಂದು ಜಲಪಾತ ವೀಕ್ಷಣೆಗೆ ಗೆಳೆಯರೊಂದಿಗೆ ತೆರಳಿದ್ದ ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದ ಯುವಕ ಪವನ್ (24) ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದರು.
ಸತತವಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರೂ ಅಬ್ಬರದ ಮಳೆಯಲ್ಲಿ ಹುಡುಕಾಟ ನಡೆಸಲು ವಿಫಲವಾದ ಹಿನ್ನಲೆಯಲ್ಲಿ ಇದೀಗ ಎನ್.ಡಿ.ಆರ್.ಎಫ್ ತಂಡ ಶೋಧ ಕಾರ್ಯ ನಡೆಸಲು ತೆರಳಿದೆ.
ಇದನ್ನೂ ಓದಿ:Sirsi news: ತಹಶೀಲ್ದಾರ್ ಹುದ್ದೆ ಖಾಲಿ ಇದ್ದರೂ ಜನಪ್ರತಿನಿಧಿಗಳು ಗಮನ ವಹಿಸುತ್ತಿಲ್ಲ
28 ಜನರಿರುವ ಎನ್.ಡಿ.ಆರ್. ಎಫ್ (NDRF) ತಂಡ ಜಲಪಾತದಲ್ಲಿ ಭೋರ್ಗರೆಯುತ್ತಿರುವ ನೀರಿನಲ್ಲೇ ಶೋಧ ಕಾರ್ಯ ಕೈಗೊಂಡಿದ್ದಾರೆ. ಹೆಚ್ಚಿನ ನೀರು ಇರುವುದರಿಂದ ಶೋಧ ನಡೆಸಲು ಅಡೆತಡೆಯಾಗುತಿದ್ದು ಇವುಗಳ ನಡುವೆಯೇ ಪವನ್ ಗಾಗಿ ಎನ್.ಡಿ.ಆರ್.ಎಫ್ ತಂಡ ಕಾರ್ಯಾ ಚರಣೆ ನಡೆಸುತ್ತಿದೆ.