
ಹುಬ್ಬಳ್ಳಿ: ಗೋವಾ ಸೇರಿದಂತೆ ಹಲವು ಪೋಲೀಸ ಠಾಣೆಗಳಿಗೆ ಬೇಕಾದ ಅಂತರಾಜ್ಯ ಕಳ್ಳನನ್ನು ಲುಂಗಿ. ಟವಲ್ ಹಾಕಿಕೊಂಡು ಮಾರುವೇಶದಲ್ಲಿ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..

ಗೋವಾ ರಾಜ್ಯದ ಹಲವು ಪೋಲೀಸ ಠಾಣೆ ಹಾಗೂ ಅಂಕಲಗಿ, ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಗೋವಾ ಮೂಲದ ಗ್ಯಾಬಿಪೌಲ್ ಫರ್ನಾಂಡಿಯಾ ಎಂಬಾತನನ್ನೇ ಬಂಧಿಸಿದ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಆತನಿಂದ ಬಂಗಾರ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.ಡಿವೈಎಸ್ಪಿ ವಿನೋದ ಮುಕ್ತೇದಾರ ನೇತೃದಲ್ಲಿ ಇನ್ಸ್ಪೆಕ್ಟರ್ ಬಿ ಎ ಕಾಮನಬೈಲ್ ಮಾರ್ಗದರ್ಶನದಲ್ಲಿ ಮಾರು ವೇಶದಲ್ಲಿ ಹಲವು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಪೋಲೀಸರು ಆರೋಪಿ ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ರಜೆಯ ಮೇಲಿದ್ದರೂ ಸಹ ಆರೋಪಿ ಪತ್ತೆ ಹಚ್ಚಲು ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಕೂಡಾ ಮಾರ್ಗದರ್ಶನ ನೀಡಿದ್ದಾರೆ.ಕಾರ್ಯಾಚರಣೆಯ ತಂಡದಲ್ಲಿ ಪಿಎಸ್ಐ ಸಚಿನ್. ಹೊನ್ನಪ್ಪಕಾಕರ.ಮಾಂತೇಶ.ಚನ್ನಪ್ಪ ಹಾಗೂ ಗಿರೀಶ.ಹನುಮರೆಡ್ಡಿ ಮಲ್ಲಿಗವಾಡ ಸಂತೋಷ್ ಚೌಹಾಣ್ ತಾಂತ್ರಿಕ ವಿಭಾಗದ ಸಿಬ್ಬಂದಿ ವಿಠಲ ದಂಗನವರ್ ಭಾಗಿಯಾಗಿದ್ದರು..