ಗೌರಿಬಿದನೂರು: ಅವಿಭಾಜ್ಯ ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬೇರ್ಪಡಿಸಿ, ಚಿಕ್ಕಬಳ್ಳಾಪುರವನ್ನು ನೂತನ ಜಿಲ್ಲೆಯಾಗಿ ಘೋಷಣೆ ಮಾಡಿ ಸುಮಾರು ಹದಿನೆಂಟು ವರ್ಷಗಳೇ ಕಳೆದು ಹೋದರೂ, ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಕಚೇರಿಗೆ ಇದುವರೆಗೂ ಪ್ರತ್ಯೇಕವಾಗಿ ಮೋಟಾರು ವಾಹನ ನಿರೀಕ್ಷಕರನ್ನು ನಿಯೋಜನೆ ಮಾಡದೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದನ್ನು ನೋಡಿದರೆ, ಸಾರಿಗೆ ಇಲಾಖೆ ಹಾಗೂ ಸರ್ಕಾರದ ಬೇಜವಾಬ್ದಾರಿ ಯನ್ನು ತೋರಿಸುತ್ತದೆ ಎಂದು ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರು ವುದು ಕಂಡು ಬರುತ್ತಿದೆ.
ಜಿಲ್ಲೆಯ ಗೌರಿಬಿದನೂರು ಹಾಗೂ ಬಾಗೇಪಲ್ಲಿ ತನಿಖಾ ಠಾಣೆಗೆ ಕಳೆದ ಹದಿನೆಂಟು ವರ್ಷಗಳಿಂದ ಲೂ ಕೋಲಾರ ಪ್ರಾದೇಶಿಕ ಸಾರಿಗೆ ಕಛೇರಿಯಿಂದಲೇ ಮೋಟಾರು ವಾಹನ ನಿರೀಕ್ಷಕ ಅಧಿಕಾರಿಗಳು ಬರುತ್ತಿರುವುದು ಕಂಡು ಬರುತ್ತಿದ್ದು,ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಸಾರ್ವಜನಿಕರಿಗೆ ಇಲಾಖೆಯಡಿ ಆಗಬೇಕಾದ ಕೆಲಸ ಕಾರ್ಯಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಇದನ್ನೂ ಓದಿ: Chikkaballapur News: M.Sc PHYSICSನಲ್ಲಿ ಆರು ಚಿನ್ನದ ಪದಕ ಪಡೆದು ಮೊದಲ ರ್ಯಾಂಕ್ ಪಡೆದ ರೂಫಿಯಾ.ಕೆ.ಎಂ
ಜಿಲ್ಲೆಯ ಜನರಿಗಾಗುತ್ತಿರುವ ತೊಂದರೆಯನ್ನು ಮನಗೊಂಡು ಜಿಲ್ಲೆಯ ಉಸ್ತುವಾರಿ ಸಚಿವರು ಶಾಸಕರು ಹಾಗೂ ಕೆಲ ಸಂಘಟನೆಗಳು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಗಳನ್ನು ಬರೆದು, ಜಿಲ್ಲೆಯ ಜನರಿಗಾಗುತ್ತಿರುವ ತೊಂದರೆಯನ್ನು ವಿವರಿಸಿ ಆದಷ್ಟು ಶೀಘ್ರವಾಗಿ ಜಿಲ್ಲೆಗೆ ಪ್ರತ್ಯೇಕವಾಗಿ ಮೋಟಾರು ವಾಹನ ನಿರೀಕ್ಷಕರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲು ಕೋರಿದ್ದರು.
ಜೊತೆಗೆ ಇತ್ತೀಚಿಗೆ ಜಲ್ಲೆಯ ರೈತ ಸಂಘದ ಪದಾಧಿಕಾರಿಗಳು ಸಾರಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಬೆಂಗಳೂರಿನ ಅವರ ಕಚೇರಿಯಲ್ಲಿ ಬೇಟಿಮಾಡಿ,ಜಿಲ್ಲೆಯ ಜನರಿಗಾಗುತ್ತಿರುವ ತೊಂದರೆಯನ್ನು ವಿವರಿಸಿ,ಜರೂರಾಗಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಮೋಟಾರು ವಾಹನ ನಿರೀಕ್ಷಕರನ್ನು ನಿಯೋಜಿಸಬೇಕೆಂದು ಆಗ್ರಹ ಪಡಿಸಿದ್ದರು.
ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಒತ್ತಾಯ ಹಾಗೂ ಜನರಿಗಾಗುತ್ತಿರುವ ತೊಂದರೆಯನ್ನು ಮನಗೊಂಡು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರತ್ಯೇಕವಾಗಿ ಮೋಟಾರು ವಾಹನ ನಿರೀಕ್ಷಕರನ್ನು ನಿಯೋಜನೆ ಮಾಡಲು ಸಾರಿಗೆ ಆಯುಕ್ತರಿಗೆ ಆದೇಶಿಸಿದ್ದರೂ ಕೂಡ ಇದುವರೆಗೂ ಸಾರಿಗೆ ಆಯುಕ್ತರು ಜಿಲ್ಲೆಗೆ ಪ್ರತ್ಯೇಕವಾಗಿ ಮೋಟಾರು ವಾಹನ ನಿರೀಕ್ಷಕರನ್ನು ನಿಯೋಜನೆ ಮಾಡಲು ಮೀನ ಮೇಷ ಏಣಿಸು ತ್ತಿರುವುದು ಕಂಡು ಬರುತ್ತಿದೆ.
ಸಾರಿಗೆ ಸಚಿವರ ಆದೇಶವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಜಿಲ್ಲೆಗೆ ಪ್ರತ್ಯೇಕ ಮೋಟಾರು ವಾಹನ ನಿರೀಕ್ಷಕರನ್ನು ನಿಯೋಜಿಸದೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವ ಸಾರಿಗೆ ಆಯುಕ್ತರ ಹಿಂದೆ ಯಾವ ಲಾಬಿ ಕೆಲಸಮಾಡುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಪ್ರಾದೇಶಿಕ ಸಾರಿಗೆ ಆಯುಕ್ತರು ತಮ್ಮ ಮಲತಾಯಿ ಧೋರಣೆಯನ್ನು ಕೈಬಿಟ್ಟು,ಈ ಕೂಡಲೆ ಜಿಲ್ಲೆಗೆ ಮೋಟಾರು ವಾಹನ ನಿರೀಕ್ಷಕರನ್ನು ನೇಮಕ ಮಾಡಬೇಕು,ಇಲ್ಲದಿದ್ದರೆ ನಂದಿಯಲ್ಲಿ ನಡೆಯುವ ಸಂಪುಟ ಸಭೆಯ ಸಂಧರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲು ಸಂಘ ಸಂಸ್ಥೆಗಳ ಪದಾಧಿಕಾಗಳು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.