ಭಾರತದ ಪ್ರಸಿದ್ಧ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಇದೀಗ ಬಿಗ್ ಬಾಸ್ ತೆಲುಗು ಸೀಸನ್ 9 (Bigg Boss Telugu 9) ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಕಿಂಗ್ ಅಕ್ಕಿನೇನಿ ನಾಗಾರ್ಜುನ ಈ ಬಾರಿಯೂ ನಿರೂಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಹಿಂದೆ ನಾಗಾರ್ಜುನ ಜಾಗಕ್ಕೆ ವಿಜಯ್ ದೇವರಕೊಂಡ, ಬಾಲಯ್ಯ ಸೇರಿದಂತೆ ಕೆಲ ಸ್ಟಾರ್ಗಳ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಅಕ್ಕಿನೇನಿ ನಾಗಾರ್ಜುನ ಅವರೇ ಈ ಬಾರಿ ಸಾರಥ್ಯ ವಹಿಸಲಿದ್ದಾರೆ.
ಬಿಗ್ ಬಾಸ್ ತೆಲುಗು ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೊನ್ನೆಯಷ್ಟೆ ಪ್ರೋಮೊ ರಿಲೀಸ್ ಆಗಿತ್ತು. ಪ್ರೋಮೋ ಸೌಂಡ್ ಮಾಡಿರುವ ಬೆನ್ನಲ್ಲೇ ಆಯೋಜಕರು, ಹೊಸ ಅನೌನ್ಸ್ಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ ತೆಲುಗು ಸೀಸನ್ 9ನಲ್ಲಿ ಈ ಬಾರಿ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೆ, ಸಾಮಾನ್ಯರಿಗೂ ಸ್ಪರ್ಧಿಗಳಾಗಿ ದೊಡ್ಡನೆಗೆ ಪ್ರವೇಶಿಸಲು ಅವಕಾಶವಿದೆ.
ಈ ಬಗ್ಗೆ ಸ್ಟಾರ್ ಮಾ ಎಂಬ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಪ್ರೋಮೋ ರಿಲೀಸ್ ಮಾಡಿದ್ದು, ಇದರಲ್ಲಿ ನಾಗಾರ್ಜುನ್ ಅವರು, ‘ಇಲ್ಲಿಯವರೆಗೆ ನೀವು ಬಿಗ್ಬಾಸ್ ಕಾರ್ಯಕ್ರಮವನ್ನು ಮೆಚ್ಚಿದ್ದೀರಾ, ಪ್ರೀತಿಸಿದ್ದೀರಾ, ಇಷ್ಟೊಂದು ಪ್ರೀತಿ ನೀಡಿದ್ದಕ್ಕಾಗಿ ನಾನು ನಿಮಗೆ ರಿಟರ್ನ್ ಗಿಫ್ಟ್ ಕೊಡಬೇಕು’ ಎಂದಿದ್ದಾರೆ. ನೀವು ತುಂಬಾ ಪ್ರೀತಿಸಿದ ಬಿಗ್ ಬಾಸ್ ಮನೆಗೆ ನೀವು ಎಂಟ್ರಿ ಕೊಡುವುದೇ ರಿಟರ್ನ್ ಗಿಫ್ಟ್. ಈ ಬಾರಿ, ಕೇವಲ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಿಲ್ಲ. ನಾವು ನಿಮಗೂ ಒಂದು ಅವಕಾಶ ನೀಡುತ್ತಿದ್ದೇವೆ ಎಂದಿದ್ದಾರೆ.
ಅಂದ್ಹಾಗೇ ತೆಲುಗು ಬಿಗ್ ಬಾಸ್ ಸೀಸನ್ 9ರಲ್ಲಿ ಭಾಗವಹಿಸಲು ಬಯಸುವವರು www.bb9.jiostar.com ವೆಬ್ಸೈಟ್ಗೆ ಲಾಗಿನ್ ಆಗಿ ಹೆಸರು ನೋಂದಾಯಿಸಿಕೊಳ್ಳಬೇಕು ಮತ್ತು ಬಿಗ್ ಬಾಸ್ 9 ರಲ್ಲಿ ತಾವು ಭಾಗವಹಿಸಲು ಬಯಸಿದ್ದೇಕೆ ಎಂದು ಕಾರಣವನ್ನು ಹೇಳುವ ವಿಡಿಯೋವನ್ನು ಅಪ್ಲೋಡ್ ಮಾಡಬೇಕು. ಹೀಗೆ ಕಳುಹಿಸಲಾದ ಅರ್ಜಿಗಳನ್ನೆಲ್ಲ ಪರಿಶೀಲಿಸಿ ಅಳೆದು ತೂಗಿ ಪ್ರತಿಭಾವಂತರಿಗೆ ಅವಕಾಶವನ್ನು ನೀಡಲು ಬಿಗ್ ಬಾಸ್ ಆಯೋಜಕರು ಮುಂದಾಗಿದ್ದಾರೆ.
ಬಿಗ್ ಬಾಸ್ನಲ್ಲೂ ಈ ಹಿಂದೆ ಸಾಮಾನ್ಯ ಜನರಿಗೆ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಕನ್ನಡ ಸೇರಿದಂತೆ ವಿವಿಧ ಭಾಷೆಯ ಬಿಗ್ ಬಾಸ್ ಶೋನಲ್ಲಿ ಸಾಮಾನ್ಯ ಭಾಗವಹಿಸಿದ್ದರು. ಶೀಘ್ರದಲ್ಲೇ ಬಿಗ್ ಬಾಸ್ ತೆಲುಗು -9 ಆರಂಭದ ದಿನಾಂಕ ಹೊರಬೀಳುವ ಸಾಧ್ಯತೆಯಿದೆ.
BBK 12: ಕಲರ್ಸ್ನಿಂದ ಬಿಗ್ ಬಾಸ್ ಕನ್ನಡ ಸೀಸನ್ 12 ಬಗ್ಗೆ ಬಿಗ್ ಅಪ್ಡೇಟ್: ಇಂದು ಸುದ್ದಿಗೋಷ್ಠಿ