ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಶತಕಗಳನ್ನು ಸಿಡಿಸಿದ್ದ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ (KL Rahul) ಅವರನ್ನು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್ (Sanjay Manjrekar) ಶ್ಲಾಘಿಸಿದ್ದಾರೆ. ಅಲ್ಲದೆ, ರಿಷಭ್ ಪಂತ್ ಅತ್ಯುತ್ತಮ ಫಾರ್ಮ್ನಲ್ಲಿದ್ದು, ಅವರು ಈ ಸರಣಿಯುದ್ದಕ್ಕೂ ಇದೇ ಲಯವನ್ನು ಮುಂದುವರಿಸಲಿದ್ದಾರೆ. ಆದರೆ, ಇವರ ಜೊತೆಗೆ ಕೆಎಲ್ ರಾಹುಲ್ ಕೂಡ ಒಂದೇ ಒಂದು ಶತಕಕ್ಕೆ ಸುಮ್ಮನಾಗುವುದಿಲ್ಲ, ಅವರು ಕೂಡ ಇನ್ನಷ್ಟು ಶತಕಗಳನ್ನು ಸಿಡಿಸಬೇಕೆಂದು ಸಲಹೆ ನೀಡಿದ್ದಾರೆ.
ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಅವರಿಂದ ಒಟ್ಟು 5 ಶತಕಗಳು ಮೂಡಿಬಂದಿದ್ದವು. ಆದರೂ, ಕಳೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುಸಿತ ಹಾಗೂ ಬೌಲಿಂಗ್ ವೈಫಲ್ಯದಿಂದ ಭಾರತ ತಂಡ, ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್ಗಳ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ಕೆಎಲ್ ರಾಹುಲ್ ಪ್ರಥಮ ಇನಿಂಗ್ಸ್ನಲ್ಲಿ 42 ರನ್ ಹಾಗೂ ದ್ವಿತೀಯ ಇನಿಂಗ್ಸ್ನಲ್ಲಿ 137 ರನ್ಗಳನ್ನು ಕಲೆ ಹಾಕಿದ್ದರು.
IND vs ENG: ʻಶುಭಮನ್ ಗಿಲ್ಗೆ ಸಮಯ ಕೊಡಿ-ಟೀಕಾಕಾರರ ವಿರುದ್ಧ ಮೊಹಮ್ಮದ್ ಅಝರುದ್ದಿನ್ ಕಿಡಿ!
ರಿಷಭ್ ಪಂತ್ಗೆ ಮಾಂಜ್ರೇಕರ್ ಮೆಚ್ಚುಗೆ
ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ ಅನ್ನು ಪ್ರೀತಿಸುತ್ತಾರೆ ಹಾಗೂ ಅವರು ಈ ಸ್ವರೂಪದಲ್ಲಿ ತಮ್ಮ ಬ್ಯಾಟಿಂಗ್ ಅನ್ನು ಆನಂದಿಸುತ್ತಾರೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್ಮನ್ ತೋರಿದ್ದ ಮಾನಸಿನ ಸಾಮರ್ಥ್ಯವನ್ನು ನೋಡಿದಾಗ ಅವರು ರನ್ ಗಳಿಸಲು ಹಸಿವನ್ನು ಹೊಂದಿದ್ದಾರೆಂದು ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.