ಕೋಲ್ಕತಾ: ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ದೂರವಿರುವ ಪತ್ನಿ ಹಸೀನ್ ಜಹಾನ್(Hasin Jahan) ಹಾಗೂ ಮಗಳ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ₹ 4 ಲಕ್ಷ ರೂ ಜೀವನಾಂಶ ನೀಡುವಂತೆ ಕ್ರಿಕೆಟಿಗ ಮೊಹಮ್ಮದ್ ಶಮಿ(Mohammed Shami) ಅವರಿಗೆ ಕೋಲ್ಕತಾ ಕೋರ್ಟ್ ಆದೇಶ ನೀಡಿದೆ. ಎರಡು ವರ್ಷಗಳ ಹಿಂದೆ ಹಸಿನ್ ಜಹಾನ್ಗೆ ಮಾಸಿಕ 1 ಲಕ್ಷದ 30ಸಾವಿರ ರೂ ಜೀವನಾಂಶ ನೀಡುವಂತೆ ಶಮಿಗೆ ಕೋಲ್ಕತಾ ಕೋರ್ಟ್ ಆದೇಶ ನೀಡಿತ್ತು. ಮತ್ತು ಹಣವನ್ನು ತಿಂಗಳಿಗೆ 50 ಸಾವಿರ ರೂ. ವೈಯಕ್ತಿಕ ಜೀವನಾಂಶವಾಗಿ ವಿಂಗಡಿಸಿ ಉಳಿದ ಮೊತ್ತ 80 ಸಾವಿರವನ್ನು ಮಕ್ಕಳ ಭತ್ಯೆಯಾಗಿ ನೀಡಬೇಕು ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಹಾನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಮುಕರ್ಜಿ, ಅರ್ಜಿದಾರರಿಬ್ಬರ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುವ ಸಲುವಾಗಿ, ಪ್ರಕರಣ ಇತ್ಯರ್ಥವಾಗುವವರೆಗೆ ಹಸೀನ್ ಜಹಾನ್ ಅವರಿಗೆ ಮಾಸಿಕ ₹ 1.50 ಲಕ್ಷ ಹಾಗೂ ಪುತ್ರಿಗೆ ₹ 2.50 ಲಕ್ಷ ನೀಡುವುದು ನ್ಯಾಯಯುತ ಮತ್ತು ಸಮಂಜಸವಾಗಿದೆ’ ಎಂದು ಹೇಳಿದ್ದಾರೆ.
ಶಮಿ ಅವರನ್ನು 2014ರ ಏಪ್ರಿಲ್ನಲ್ಲಿ ವಿವಾಹವಾಗಿದ್ದ ಜಹಾನ್, 2018ರಲ್ಲಿ ಪತ್ನಿ ಹಸೀನಾ ಜಹಾನ್ ಅವರು ಶಮಿ ಹಾಗೂ ಅವರ ಸಹೋದರನ ವಿರುದ್ಧ ಕೊಲೆ ಯತ್ನ, ಕಿರುಕುಳ ಹಾಗೂ ಅತ್ಯಾಚಾರದ ಆರೋಪ ಹೊರಿಸಿ ಕೋಲ್ಕತ್ತದ ಜಾಧವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜತೆಗೆ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನೂ ಮಾಡಿದ್ದರು.
ಇದನ್ನೂ ಓದಿ IND vs ENG 2nd Test: ಹೇಗಿರಬಹುದು ದ್ವಿತೀಯ ಟೆಸ್ಟ್ಗೆ ಭಾರತ ಆಡುವ ಬಳಗ?
ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ), ಭ್ರಷ್ಟಾಚಾರ ತಡೆ ಘಟಕಕ್ಕೆ (ಎಸಿಯು) ಸೂಚಿಸಿತ್ತು. ಜೊತೆಗೆ ಕೇಂದ್ರೀಯ ಗುತ್ತಿಗೆ ಪದ್ಧತಿಯಿಂದ ಶಮಿ ಅವರ ಹೆಸರನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು. ಆ ಬಳಿಕ ಶಮಿ ಫಿಕ್ಸಿಂಗ್ ಮಾಡಿಲ್ಲ ಇದೊಂಉ ಸುಳ್ಳು ಆರೋಪ ಎಂದು ವರದಿ ಬಂದ ಬಳಿಕ ಅವರನ್ನು ಕೇಂದ್ರೀಯ ಗುತ್ತಿಗೆ ಸೇರಿಸಲಾಗಿತ್ತು.