ವಾರಣಾಸಿ: ಜನರು ಟ್ರಾಫಿಕ್ ಪೊಲೀಸರು (Traffic Police) ವಿಧಿಸುವ ದಂಡದಿಂದ ತಪ್ಪಿಸಿಕೊಳ್ಳಲು ಯತ್ನಿಸುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದ ಸಮಾಜ ಕಲ್ಯಾಣ ಸಚಿವ (Social Welfare Minister) ಅಸೀಮ್ ಅರುಣ್ (Asim Arun) ಸ್ವತಃ ವಾರಣಾಸಿ ಪೊಲೀಸ್ ಕಮಿಷನರ್ಗೆ ಕರೆ ಮಾಡಿ, ತಮಗೆ ಒದಗಿಸಿದ ವಾಹನಕ್ಕೆ ಟ್ರಾಫಿಕ್ ಚಲನ್ ಜಾರಿ ಮಾಡುವಂತೆ ಕೋರಿದ್ದಾರೆ.
ಹೌದು ಉತ್ತರ ಪ್ರದೇಶದ ಸಮಾಜ ಕಲ್ಯಾಣ ಸಚಿವ ಅಸೀಮ್ ಅರುಣ್ ಕರ್ತವ್ಯ ನಿಷ್ಠೆಯನ್ನು ಮೆರೆದಿದ್ದು, ಸಂಚಾರಿ ನಿಯಮ ಉಲ್ಲಂಘಣೆ ಮಾಡಿದಕ್ಕಾಗಿ ತಮಗೆ ದಂಡ ವಿಧಿಸುವಂತೆ ಕೇಳಿಕೊಂಡಿದ್ದಾರೆ. ಈ ಮೂಲಕ ರಾಜಕೀಯ ನಾಯಕರು ಸಾಮಾನ್ಯ ಜನರು ಸಮಾನರು ಎಂಬ ಸಂದೇಶವನ್ನು ನೀಡಿದ್ದು, ಕಾನೂನು ಎಂಬುದು ಎಲ್ಲಾರಿಗೂ ಎಂದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸೋಮವಾರ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸಚಿವರಿಗೆ ಶಿಷ್ಟಾಚಾರದನ್ವಯ ನೀಡಲಾದ ಇನ್ನೋವಾ ಕಾರಿನಲ್ಲಿ ನೀಲಿ ದೀಪವಿತ್ತು. ಇದು ಸಂಚಾರಿ ನಿಯಮದ ಪ್ರಕಾರ ಕಾನೂನು ಬಾಯಿರವಾಗಿದ್ದು, ಟ್ರಾಫಿಕ್ ರೂಲ್ಸ್ ಗಳನ್ನು ಗೌರವಿಸಿದ ಸಚಿವ ಅರುಣ್ ಆ ವಾಹನದಲ್ಲಿ ಪ್ರಯಾಣಿಸಲು ನಿರಾಕರಿಸಿ, ವಾರಣಾಸಿ ಪೊಲೀಸ್ ಕಮಿಷನರ್ಗೆ ಕರೆ ಮಾಡಿ ಚಲನ್ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Vaishnavi Gowda: ಮನಾಲಿಯಲ್ಲಿ ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್ ಮಸ್ತಿ: ವೈರಲ್ ಆಗ್ತಿದೆ ಫೋಟೋಸ್
ಕಾರಿನ ಮೇಲೆ ನೀಲಿ ದೀಪವನ್ನು ಅಳವಡಿಸಲು ಯಾವುದೇ ಅವಕಾಶವಿಲ್ಲ. ಕೋರ್ಟ್ ನಿಷೇಧ ಹೇರಿದ್ದರೂ ಕೆಲ ವಾಹನಗಳಲ್ಲಿ ಇಂತಹ ದೀಪಗಳು ಅಥವಾ ಸ್ಟಿಕರ್ಗಳಿವೆ. ಕೆಲವು ಅಧಿಕಾರಿಗಳು ತಮ್ಮ ಪ್ರಭಾವ ಪ್ರದರ್ಶಿಸಲು ಇದನ್ನು ಬಳಸುದಿದ್ದಾರೆ, ಇದನ್ನು ತಪ್ಪಿಸಬೇಕು. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.
ಅಸೀಮ್ ಅರುಣ್, ವಾರಣಾಸಿ ಪೊಲೀಸ್ ಕಮಿಷನರ್ ಮೋಹಿತ್ ಅಗರವಾಲ್ಗೆ ಪತ್ರ ಬರೆದು ಜೂನ್ 30ರಂದು ವಾರಣಾಸಿಗೆ ಆಗಮಿಸಿದ ಸಂದರ್ಭದಲ್ಲಿ ನನಗೆ ಒದಗಿಸಲಾದ ವಾಹನದಲ್ಲಿ ಅನಧಿಕೃತ ದೀಪವಿತ್ತು. ಆದ್ದರಿಂದ ಆ ವಾಹನವನ್ನು ಬಳಸಲಿಲ್ಲ. ನಿಯಮ ಉಲ್ಲಂಘನೆಗಾಗಿ ಈ ವಾಹನಕ್ಕೆ ಚಲನ್ ಜಾರಿಗೊಳಿಸಿ ಎಂದು ಕೋರಿದ್ದಾರೆ. ಪತ್ರದೊಂದಿಗೆ ವಾಹನದ ವಿವರಗಳು ಮತ್ತು ಫೋಟೋವನ್ನು ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಖಾತೆಯ ಸ್ವತಂತ್ರ ಉಸ್ತುವಾರಿ ಸಚಿವರಾದ ಅರುಣ್, ವಾರಣಾಸಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಘನತೆಯ ಸಮ್ಮೇಳನಕ್ಕೆ ತೆರಳಿದ್ದರು. ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ಸಭೆಯಲ್ಲೂ ಭಾಗವಹಿಸಿದ್ದರು. ಮಾಜಿ ಐಪಿಎಸ್ ಅಧಿಕಾರಿಯಾದ ಅರುಣ್ ಅವರ ತಂದೆ ಯುಪಿಯ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.