ನಾಯಕನಹಟ್ಟಿ :
ಹಟ್ಟಿ ತಿಪ್ಪೇಶನ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳಿಂದ ಸೂಕ್ತ ನೆಲೆ ಇಲ್ಲದೆ ಸುಡುಗಾಡು ಸಿದ್ದ ಜನಾಂಗದವರು ಪ್ರತಿ ವರ್ಷ ಒಂದೊಂದು ಸ್ಥಳದಲ್ಲಿ ವಾಸಿಸುತ್ತಾ ಬಂದಿರುತ್ತಾರೆ. ಅವರಿಗೆ ಸೂಕ್ತ ನೆಲೆ ನಿರ್ಮಿಸಿಕೊಡಬೇಕೆಂದು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪ್ರಭಲ ಟಿಕೆಟ್ ಆಕಾಂಕ್ಷಿ ಪಟೇಲ್ ಕೆ.ಬಿ ಕೃಷ್ಣಗೌಡ ಮನವಿ ಮಾಡಿಕೊಂಡರು.
ಪಟ್ಟಣದಲ್ಲಿ ಬುಧವಾರ ಸುಡುಗಾಡು ಸಿದ್ದರಿಗೆ ಮೀಸಲಿರುವ ಜಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರನ್ನು ಸುಡುಗಾಡು ಸಿದ್ದ ಜನಾಂಗದವರು ಬೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ಆದ್ದರಿಂದ ಮಾಜಿ ಶಾಕಸರ ನಿರ್ದೇಶನದಂತೆ ರಿ.ಸರ್ವೇ ನಂ:193 ರಲ್ಲಿ ಸುಡುಗಾಡು ಸಿದ್ದ ಜನಾಂಗಕ್ಕೆ ಮೀಸಲಿರುವ ಜಾಗವನ್ನು ಸ್ವಚ್ಚಗೊಳಿಸಿಕೊಂಡು ವಾಸಿಸುವಂತೆ ಹೇಳಿ ಅವರಿಗೆ ಅಗತ್ಯವಿರುವ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಲಾಯಿತು.
ಕೆ.ಎಂ.ಪಂಚಾಕ್ಷರಿಸ್ವಾಮಿ ಮಾತನಾಡಿ ಈ ಭಾಗದಲ್ಲಿ ಸುಡುಗಾಡು ಸಿದ್ದರು 40 ವರ್ಷಗಳಿಂದ ಪಟ್ಟಣದಲ್ಲಿ ನೆಲೆಸಿದ್ದಾರೆ. ಇವರಿಗೆ ಆಶ್ರಯ ಯೋಜನೆಯಡಿಯಲ್ಲಿ ಮನೆಗಳನ್ನು ನೀಡುವುದಾಗಿ ಹೇಳಿ ಪಟ್ಟಣ ಪಂಚಾಯಿತಿ ಸದಸ್ಯರುಗಳು ಮತಗಳನ್ನ ಹಾಕಿಸಿಕೊಂಡು ಸುಡುಗಾಡು ಸಿದ್ದ ಜನಾಂಗದವರಿಗೆ ವ್ಯವಸ್ಥೆ ಕಲ್ಪಿಸಿರಲಿಲ್ಲ. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರ ಗಮನಕ್ಕೆ ತಂದಾಗ ನೀವುಗಳು ಎಲ್ಲಿಗೂ ಹೋಗಬೇಕಾಗಿಲ್ಲ, ಅವರಿಗೆ ಅಗತ್ಯವಿರುವ ವಸ್ತುಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.
ತಾತ್ಕಾಲಿಕವಾಗಿ ನೆಲೆಸುವುದಕ್ಕೆ ವ್ಯವಸ್ಥೆ ಕಲ್ಪಿಸಿ ಎಂದು ವಿನಂತಿಸಿಕೊಂಡಾಗ ನಮ್ಮ ವಿನಂತಿಯನ್ನು ಸ್ವೀಕರಿಸಿ ಈ ದಿನ ಆಹಾರ ಸಾಮಾಗ್ರಿಗಳನ್ನು ನೀಡುವುದರ ಜೊತೆಗೆ ಊಟ, ತಿಂಡಿ ವ್ಯವಸ್ಥೆ ಕೊಡಿಸಿ ಅಳಿಲು ಸೇವೆ ಮಾಡುವುದಾಗಿ ತಿಳಿಸಿದರು. ಯಾರಾದರು ದಾನಿಗಳು ಇದ್ದರೆ ಸುಡುಗಾಡು ಸಿದ್ದ ಜನಾಂಗಕ್ಕೆ ತಮ್ಮ ಕೈಲಾದ ಸಹಾಯ ಮಾಡಿ ಎಂದು ವಿನಂತಿಸಿಕೊAಡರು. ಆಶ್ರಯ ಯೋಜನೆಯಲ್ಲಿ ಅಡಿಯಲ್ಲಿ ಸುಡುಗಾಡು ಸಿದ್ದ ಜನಾಂಗದವರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಈ ಮೂಲಕ ಅಧಿಕಾರಿಗಳಿಗೆ ಹೇಳಿದರು.