ಬೆಂಗಳೂರು :
ಸರ್ವ ಸಂಘಟನೆಗಳ ಬೀದಿ ವ್ಯಾಪಾರಿಗಳ ಸಹಭಾಗಿತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುತಾಯದ ಹೋರಾಟ ಮಳೆ, ಬಿಸಿಲು, ಛಳಿ, ಗಾಳಿ, ಧೂಳು ಎನ್ನದೇ ದಿನನಿತ್ಯ ಕೈಗೆಟುಕುವ ದರದಲ್ಲಿ ಅವಶ್ಯಕ ವಸ್ತುಗಳನ್ನು ಸಾರ್ವಜನಿಕರಿಗೆ ಸಿಗುವಂತೆ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ಅದು ಬೀದಿ ಬದಿ ವ್ಯಾಪಾರಿ. ಬೀದಿ ಬದಿ ವ್ಯಾಪಾರಿಗೂ ಒಂದು ಜೀವನವಿದೆ ಮತ್ತು ಅವನಿಗೂ ಕಾಣುನಾತ್ಮಕ ಮನ್ನಣೆ ಇದೆ. 2014 ಸಾಲಿನಲ್ಲಿ ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗಾಗಿ ಕಾನೂನು ಜಾರಿಗೆ ಬಂದಿದೆ.
ಆದರೆ ವ್ಯವಸ್ಥಿತವಾಗಿ ಅನುಷ್ಠಾನ ಗೊಂಡಿರುವುದಿಲ್ಲ. ಇಲ್ಲಿ ನಾವು ಯಾರ ಮೇಲೆ ದೂರಬೇಕೆಂಬುದು ಒಂದು ರೀತಿಯ ಜಿಗುಪ್ಪೆಯಾಗಿದೆ. ಕಾನೂನಿನಲ್ಲಿ ಮೊಟ್ಟಮೊದಲು ವ್ಯಾಪಾರ ವಲಯಗಳನ್ನು ಗುರುತಿಸಬೇಕು. ಪಟ್ಟಣ ವ್ಯಾಪಾರ ಸಮಿತಿಯಲ್ಲಿ ನಿರ್ಧಾರ ಗೊಂಡು ಸಮೀಕ್ಷೆ ನಡೆಯಬೇಕು ಮತ್ತು ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ನೀಡಬೇಕು. ಆದರೆ ಪೂರ್ಣ ಪ್ರಮಾಣ ಪೂರಕವಾತಾವರಣ ಯಾವ ಸಂಕೇತ ಗಳು ಕಾಣುತ್ತಿಲ್ಲ ಹೀಗಾಗಿ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಕರುನಾಡು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷರಾದ ಸುರೇಶ್ ಎನ್ ತಿಳಿಸಿದರು.
ಬೇಡಿಕೆಗಳು
1) ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ರಾಜ್ಯದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಪರ್ಯಾಯ ವ್ಯವಸ್ಥೆ ಇಲ್ಲದೆ ತೆರವುಗೊಳಿಸಬಾರದು.
2) ಬೀದಿ ಬದಿ ವ್ಯಾಪಾರಿಗಳನ್ನು ಕ್ರಮಬದ್ದ ಸರ್ವೆ ಮಾಡಬೇಕು.
3) ಪಟ್ಟಣ ವ್ಯಾಪಾರ ಸಮಿತಿಯಿಂದ ಬೀದಿ ಬದಿ ವ್ಯಾಪಾರಿಗಳ ಹಕ್ಕು, ನಿರ್ಣಯವಾಗಬೇಕು.
4) ಬೀದಿ ಬದಿ ವ್ಯಾಪಾರಿಗಳನ್ನು ಪೂರ್ತಿ ಪ್ರಮಾಣದ ಸರ್ವೆ ಮಾಡಬೇಕು.
5) ಪಟ್ಟಣ ವ್ಯಾಪಾರ ಸಮಿತಿಯಿಂದಲೇ ಐಡಿ ಕಾರ್ಡ್ ಪ್ರಮಾಣ ಪತ್ರವನ್ನು ಮೊದಲು ಪೂರೈಸುವ ನಿಯಮಗಳನ್ನು ಮಾಡಬೇಕು.
6) ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆ ಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಕುಂದು ಕೊರತೆ ಸಮಿತಿಯನ್ನು ರಚಿಸಬೇಕು.