ಬರ್ಮಿಂಗ್ಹ್ಯಾಮ್: ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XI (IND Playing XI) ಬಗ್ಗೆ ಅನುಭವಿ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಪ್ಲೇಯಿಂಗ್ XIರಲ್ಲಿ ಗೌತಮ್ ಗಂಭೀರ್ ಮಾರ್ಗದರ್ಶನದ ಟೀಮ್ ಮ್ಯಾನೇಜ್ಮೆಂಟ್ 3 ಬದಲಾವಣೆಗಳನ್ನು ತಂದುಕೊಂಡಿದೆ. ಆದರೆ ಅತ್ಯಂತ ಅಚ್ಚರಿಯ ನಿರ್ಧಾರವೆಂದರೆ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಹೊರತುಪಡಿಸಿ ಸಾಯಿ ಸುದರ್ಶನ್ ಮತ್ತು ಶಾರ್ದುಲ್ ಠಾಕೂರ್ ಅವರನ್ನು ಕೈಬಿಡಲಾಗಿದೆ. ಮತ್ತೊಂದೆಡೆ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಮತ್ತು ಆಕಾಶ್ ದೀಪ್ ಅವರನ್ನು ಪ್ಲೇಯಿಂಗ್ XIಗೆ ತರಲಾಗಿದೆ. ಎಜ್ಬಾಸ್ಟನ್ ಪಿಚ್ನಲ್ಲಿ ಕುಲ್ದೀಪ್ ಯಾದವ್ (Kuldeep Yadav) ಪರಿಣಾಮಕಾರಿಯಾಗಿರಬಹುದಿತ್ತು ಎಂದು ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದ ಪ್ಲೇಯಿಂಗ್ XI ಪ್ರಕಟವಾದ ಬಳಿಕ ಪ್ರತಿಕ್ರಿಯಿಸಿದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್, ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡದಿರುವುದು ನನಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ. “ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡದಿರುವುದು ನನಗೆ ಆಘಾತವನ್ನುಂಟು ಮಾಡಿದೆ, ಏಕೆಂದರೆ ಇಲ್ಲಿನ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚಿನ ತಿರುವು ನೀಡುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.
IND vs ENG: ಶತಕ ಸಿಡಿಸಿ ಎಂಎಸ್ ಧೋನಿ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭಮನ್ ಗಿಲ್!
ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ರನ್ ಗಳಿಸದಿದ್ದರೆ, ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಪ್ಲೇಯಿಂಗ್ XIಗೆ ಕರೆತರುವುದು ಪರಿಹಾರವಲ್ಲ ಎಂದು ಸುನೀಲ್ ಗವಾಸ್ಕರ್ ಕೋಪದ ಸ್ವರದಲ್ಲಿ ಹೇಳಿದರು. ಏಕೆಂದರೆ ಮೊದಲ ಟೆಸ್ಟ್ನಲ್ಲಿ ನೀವು ವಿಫಲರಾಗಲು ಕಾರಣ ಈ ಬ್ಯಾಟ್ಸ್ಮನ್ಗಳಲ್ಲ. ತಂಡವು ಮೊದಲ ಟೆಸ್ಟ್ನಲ್ಲಿ ಒಟ್ಟು 830 ರನ್ ಗಳಿಸಿತು, ಇದು ಬಹಳಷ್ಟು ರನ್ಗಳು ಎಂದು ಹೇಳಿದ್ದಾರೆ.
“ನಿಮ್ಮ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ನೀವು ನಿರೀಕ್ಷಿಸಿದಷ್ಟು ರನ್ಗಳನ್ನು ಗಳಿಸದಿದ್ದರೆ, ಏಳನೇ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಅಥವಾ ಎಂಟನೇ ಕ್ರಮಾಂಕದಲ್ಲಿ ನಿತೀಶ್ ರೆಡ್ಡಿ ಅದನ್ನು ಸರಿಪಡಿಸುವುದಿಲ್ಲ, ಏಕೆಂದರೆ ಮೊದಲ ಟೆಸ್ಟ್ನಲ್ಲಿ ನಿಮ್ಮನ್ನು ವಿಫಲಗೊಳಿಸಿದ ಬ್ಯಾಟ್ಸ್ಮನ್ಗಳು ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಅಲ್ಲ. ನೀವು 830 ರನ್ ಗಳಿಸಿದ್ದೀರಿ. ನೀವು ಎರಡೂ ಇನಿಂಗ್ಸ್ಗಳಲ್ಲಿ 380 ರನ್ ಗಳಿಸಿಲ್ಲ- ಅದು 830-ಪ್ಲಸ್ ಆಗಿತ್ತು. ಅದು ಬಹಳಷ್ಟು ರನ್ಗಳು,” ಎಂದು ಅವರು ತಿಳಿಸಿದ್ದಾರೆ.
IND vs ENG: ʻಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಬೇಕಿತ್ತಾ?ʼ-ರವಿಶಾಸ್ತ್ರಿ ಟೀಕೆ!
ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದ ಬಗ್ಗೆ ರವಿ ಶಾಸ್ತ್ರಿ ಬೇಸರ
ಇದಕ್ಕೂ ಮುನ್ನ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಜಸ್ಪ್ರೀತ್ ಬುಮ್ರಾ ಅವರನ್ನು ಪ್ಲೇಯಿಂಗ್ XIನಿಂದ ಕೈಬಿಡಲಾಗಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವರ್ಕ್ ಮ್ಯಾನೇಜ್ಮೆಂಟ್ನಿಂದಾಗಿ ಎರಡನೇ ಟೆಸ್ಟ್ನಿಂದ ಗಿಲ್ಗೆ ವಿಶ್ರಾಂತಿ ನೀಡಲಾಗಿದೆ ಎಂದು ನಾಯಕ ಶುಭಮನ್ ಗಿಲ್ ಹೇಳಿದ್ದರು.
“ಎರಡು ಟೆಸ್ಟ್ ಪಂದ್ಯಗಳ ನಡುವೆ ಒಂದು ವಾರ ಅಂತರವಿತ್ತು. ಆದರೂ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿರುವುದು ನನಗೆ ಅಚ್ಚರಿ ಮೂಡಿಸಿದೆ. ಪಂದ್ಯದಲ್ಲಿ ಆಡುವುದು ಆಟಗಾರರ ಕೈಯಲ್ಲಿರುವುದಿಲ್ಲ. ಅದು ನಾಯಕ ಹಾಗೂ ತರಬೇತಿ ಸಿಬ್ಬಂದಿಯ ನಿರ್ಣಯವಾಗಿರುತ್ತದೆ. ಟೆಸ್ಟ್ ಸರಣಿಯ ದೃಷ್ಟಿಯಿಂದ ಈ ಪಂದ್ಯ ಸಾಕಷ್ಟು ಮಹತ್ವ ಪಡೆದಿದೆ. ಆದ್ದರಿಂದ ಬುಮ್ರಾ ಈ ಪಂದ್ಯದಲ್ಲಿ ಆಡುವುದು ನಿರ್ಣಾಯಕವಾಗಿತ್ತು. ಮುಂದಿನ ಪಂದ್ಯ ಲಾರ್ಡ್ಸ್ನಲ್ಲಿ ನಡೆಯಲಿದೆ. ಆದ್ದರಿಂದ ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವು ಪ್ರಮುಖವಾಗಿತ್ತು,” ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.