ಪುಣೆ: ಗೋವಾದಿಂದ ಮಂಗಳವಾರ ಪುಣೆ ಕಡೆಗೆ ಹೋಗುತ್ತಿದ್ದ ಸ್ಪೈಸ್ಜೆಟ್ (SpiceJet aircraft) ವಿಮಾನದ ಕಿಟಕಿ ಚೌಕಟ್ಟು ಗಾಳಿಯಲ್ಲಿಯೇ ಕಳಚಿಬಿದ್ದಿದೆ. ಏಕಾಏಕಿ ಸಂಭವಿಸಿದ ಘಟನೆಯಿಂದಾಗಿ ಪ್ರಯಾಣಿಕರು (Viral Video) ಆತಂಕಕ್ಕೀಡಾಗಿದ್ದಾರೆ. ಆದಾಗ್ಯೂ, ವಿಮಾನದ ಉದ್ದಕ್ಕೂ ಕ್ಯಾಬಿನ್ ಒತ್ತಡವು ಸಾಮಾನ್ಯವಾಗಿತ್ತು ಮತ್ತು ಪ್ರಯಾಣಿಕರ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಸದ್ಯ ಈ ಕಿಟಕಿ ಹಾರಿ ಬಿದ್ದಿರುವುದು ವೈರಲ್ ಆಗಿದೆ.
ಮಂಗಳವಾರ SG1080 ವಿಮಾನ ಗೋವಾದಿಂದ ಪುಣೆಗೆ ತೆರಳುತ್ತಿದ್ದಾಗ ಕಿಟಕಿಯ ಚೌಕಟ್ಟು ಬಹುತೇಕ ಹೊರಬರುವ ಹಂತಕ್ಕೆ ತಲುಪಿತ್ತು, ಇದರಿಂದಾಗಿ ಪ್ರಯಾಣಿಕರು ಆತಂಕಗೊಂಡಿದ್ದರು. ವಿಮಾನವು ಗಾಳಿಯಲ್ಲಿದ್ದಾಗ ಸಡಿಲಗೊಂಡ ಕಿಟಕಿ ಚೌಕಟ್ಟನ್ನು ಪ್ರಯಾಣಿಕನೊಬ್ಬ ವಿಡಿಯೋ ಮಾಡಿದ್ದಾನೆ. ಮುಂದಿನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನದ ವಿಂಡೋವನ್ನು ಸರಿ ಮಾಡಲಾಗಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನವು ಪುಣೆ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ನಂತರ ಚೌಕಟ್ಟನ್ನು ಸರಿಪಡಿಸಲಾಯಿತು.
ವಿಮಾನದ ಹಾರಾಟ ಯೋಗ್ಯತೆಯನ್ನು ಪ್ರಶ್ನಿಸಿ, ಪ್ರಯಾಣಿಕನೊಬ್ಬ X ನಲ್ಲಿ ಕಿಟಕಿ ಕಳಚಿ ಬಿದ್ದಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಗೋವಾದಿಂದ ಪುಣೆಗೆ ಬಂದ ಸ್ಪೈಸ್ಜೆಟ್. ಹಾರಾಟದ ಮಧ್ಯದಲ್ಲಿ ಇಡೀ ಒಳಗಿನ ಕಿಟಕಿ ಜೋಡಣೆ ಬಿದ್ದುಹೋಯಿತು. ಮತ್ತು ಈ ವಿಮಾನವು ಈಗ ಟೇಕ್ ಆಫ್ ಆಗಿ ಜೈಪುರಕ್ಕೆ ಹೋಗಲಿದೆ. ಇದು ಹಾರಾಟಕ್ಕೆ ಯೋಗ್ಯವಾಗಿದೆಯೇ ಎಂದು ಆಶ್ಚರ್ಯ ಪಡುತ್ತೇನೆ” ಎಂದು ಪ್ರಯಾಣಿಕನು ಪೋಸ್ಟ್ನಲ್ಲಿ ವಾಯುಯಾನ ಸುರಕ್ಷತಾ ನಿಯಂತ್ರಕ DGCA ಗೆ ಟ್ಯಾಗ್ ಮಾಡಿ ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ: Flight delayed: ಏರ್ ಇಂಡಿಯಾದ ವಿಮಾನದ ರೆಕ್ಕೆಯಲ್ಲಿ ಸಿಲುಕಿದ ಹುಲ್ಲು; ಬ್ಯಾಂಕಾಕ್ಗೆ ತೆರಳಬೇಕಿದ್ದ ವಿಮಾನ 5 ಗಂಟೆ ವಿಳಂಬ
ದೇಶದಲ್ಲಿ ವಿಮಾನ ಯಾನದ ಕುರಿತು ಆತಂಕ ಮೂಡುತ್ತಿರುವಾಗಲೇ ಭಾರೀ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಏರ್ ಇಂಡಿಯಾ ವಿಮಾನ 900 ಅಡಿ ಎತ್ತರದಿಂದ ಕುಸಿದಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಜೂ. 14ರಂದು ದಿಲ್ಲಿಯಿಂದ ವಿಯೆನ್ನಾಗೆ ಹೊರಟಿದ್ದ AI 187 ಬೋಯಿಂಗ್ 777 ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ 900 ಅಡಿ ಎತ್ತರದಿಂದ ಕುಸಿಯಿತು. ಅದಾಗ್ಯೂ ಪೈಲಟ್ಗಳು ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ವಿಯೆನ್ನಾಗೆ ಕೊಂಡೊಯ್ದರು. ಹೀಗೆ ಬಹುದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತು.