ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಗಳಾದ ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ (Divya Uruduga) ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇವರ ಲವ್ ಸ್ಟೋರಿ ಎಲ್ಲದಕ್ಕಿಂತ ಭಿನ್ನವಾಗಿದೆ. ಇವರ ಲವ್ಗೆ ಈಗ ನಾಲ್ಕು ವರ್ಷಗಳು ಕೂಡ ತುಂಬಿವೆ. ಪ್ರತಿಬಾರಿ ಇವರ ಸಿಕ್ಕಾಗೆಲ್ಲ ಕೇಳುವ ಒಂದೇ ಪ್ರಶ್ನೆ ಮದುವೆ ಯಾವಾಗೆಂದು. ಆದರೆ, ಒಂದಲ್ಲ ಒಂದು ಕಾರಣ ನೀಡಿ ಈ ಜೋಡಿ ಮದುವೆ ವಿಚಾರವನ್ನು ತಪ್ಪಿಸುತ್ತಲೇ ಇದೆ. ಇದರ ಮಧ್ಯೆ ಇವರಿಬ್ಬರ ಸುತ್ತಾಟ ಕಡಿಮೆ ಆಗಿಲ್ಲ. ಫ್ರೀ ಟೈಮ್ ಸಿಕ್ಕಾಗೆಲ್ಲ ಈ ಜೋಡಿ ಎಲ್ಲಾದರು ಟ್ರಿಪ್ ಹೋಗುತ್ತಲೇ ಇರುತ್ತದೆ.
ಸೋಶಿಯಲ್ ಮೀಡಿಯಾದಲ್ಲಾಗಲಿ, ಯಾವುದೇ ಕಾರ್ಯಕ್ರಮದಲ್ಲಾಗಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅರವಿಂದ್ ಕೆಪಿ ಬೈಕ್ ರ್ಯಾಲಿಗಳಲ್ಲೂ ದಿವ್ಯಾ ಹಾಜರಿರುತ್ತಾರೆ. ಇಬ್ಬರು ಜೊತೆಯಾಗಿ ಅರ್ಧಂಬರ್ಧ ಪ್ರೇಮ ಕಥೆ ಎನ್ನುವ ಸಿನಿಮಾ ಕೂಡ ಮಾಡಿದ್ದರು. ದಿವ್ಯಾ ಉರುಡುಗ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ರಚನಾ ಆಗಿ ಅಭಿನಯಿಸುತ್ತಿದ್ದಾರೆ. ಇನ್ನು ಅರವಿಂದ್ ಕೆಪಿ ಸದ್ಯ ಬೈಕ್ ರ್ಯಾಲಿಗಳಲ್ಲೇ ಬ್ಯುಸಿಯಾಗಿದ್ದಾರೆ.
ಇದೀಗ ಇಬ್ಬರೂ ಫ್ರೀ ಮಾಡಿಕೊಂಡು ದುಬೈ ಟ್ರಿಪ್ ಹೋಗಿದ್ದಾರೆ. ದುಬೈ ಟ್ರಿಪ್ನಲ್ಲಿ ದಿವ್ಯಾ ಉರುಡುಗ ಸಾಹಸವೊಂದನ್ನು ಮಾಡಿದ್ದಾರೆ. ದುಬೈನ ಅತ್ಯಂತ ಪ್ರಸಿದ್ಧ ಸ್ಕೈ ಡೈವಿಂಗ್ನಲ್ಲಿ ಬರೋಬ್ಬರಿ 13 ಸಾವಿರ ಅಡಿ ಎತ್ತರದಿಂದ ಕೆಳಕ್ಕೆ ಜಂಪ್ ಮಾಡಿದ್ದಾರೆ. ಸ್ಕೈ ಡೈವಿಂಗ್ ಮಾಡಬೇಕು ಅಂತ ನಟಿ ದಿವ್ಯಾ ಉರುಡುಗ ಅವರಿಗೆ ಆಸೆ ಇತ್ತಂತೆ. ಕೊನೆಗೂ ಅದನ್ನೂ ಈಡೇರಿಸಿಕೊಂಡಿದ್ದಾರೆ.