ಚೆನ್ನೈ:
ಚೆನ್ನೈನ ಪಶ್ಚಿಮ ಉಪನಗರದಲ್ಲಿರುವ ತಿರುನಿಂದ್ರವೂರ್ ಪುರಸಭೆಯ ಮಹಿಳಾ ಕೌನ್ಸಿಲರ್ ಒಬ್ಬರನ್ನು ಅವರ ಪತಿಯೇ ಕೊಚ್ಚಿ ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.ಎಸ್ ಗೋಮತಿ (38) ಮೃತ ಕೌನ್ಸಿಲರ್, ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪುರಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ವಯಕ್ತಿಕ ಕಾರಣಗಳಿಂದಾಗಿ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಗುರುವಾರ ರಾತ್ರಿ ತಿರುನಿನ್ರವೂರಿನ ಪೆರಿಯಾರ್ ಕಾಲೋನಿಯಲ್ಲಿರುವ ಅವರ ಮನೆಯ ಬಳಿ ಆಕೆಯ ಪತಿ ಸ್ಟೀಫನ್ ರಾಜ್ ಹಲ್ಲೆ ನಡೆಸಿದ್ದ, ತೀವ್ರವಾಗಿ ಗಾಯಗೊಂಡಿದ್ದ ಸಾವನ್ನಪ್ಪಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಅಲ್ಲಿಯೇ ಸ್ಟೀಪನ್ ರಾಜ್ ಪೊಲೀಸರ ಮುಂದೆ ಶರಣಾಗಿದ್ದಾರೆ.
ಈ ಸಂಬಂಧ ತನಿಖೆ ಮುಂದುವರಿದಿದೆ. ದಂಪತಿ ಸುಮಾರು ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ವಿಸಿಕೆ ಪಕ್ಷದ ಸದಸ್ಯರಾಗಿದ್ದರು.