ನಾಯಕನಹಟ್ಟಿ
ನಾನೂ ಸಹ ಸರ್ಕಾರಿ ಶಾಲೆಯಲ್ಲಿ ಓದಿದಂತಹ ವ್ಯಕ್ತಿ, ಸರ್ಕಾರಿ ಶಾಲೆಯ ಮಕ್ಕಳು ಅಪಾರವಾದ ಪ್ರೀತಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಮಾದಯ್ಯನಹಟ್ಟಿ ಗ್ರಾಮದಲ್ಲಿ ಶನಿವಾರ ೨ನೇ ವರ್ಷದ ಮಾರಿಕಾಂಬ ಕ್ರಿಕೇರ್ಸ್ ವತಿಯಿಂದ ದಿವಂಗತ ಬಿ.ಬೈಯಣ್ಣ ಎನ್. ಲೋಕೇಶ್, ಗಟ್ಟಪ್ಪನಾಯಕ, ಸ್ಮಾರಣಾರ್ತಕವಾಗಿ ಮಾದಯ್ಯನಹಟ್ಟಿ ಪ್ರೀಮಿಯರ್ ಲೀಗ್ ಕ್ರಿಕೇಟ್ ಟೂರ್ನಿಮೆಂಟ್ ಆಯೋಜಿಸಲಾಯಿತು. ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ಬುಕ್ ಪೆನ್ನು, ಪುಸ್ತಕ ವಿತರಿಸಲಾಯಿತು.
ನಂತರ ಮಾತನಾಡಿದ ಅವರು ಮಕ್ಕಳು ಚೆನ್ನಾಗಿ ಓದಬೇಕು, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನೀವು ಚೆನ್ನಾಗಿ ಓದಿದರೆ ಉನ್ನತಮಟ್ಟದಲ್ಲಿ ಇರಲಿಕ್ಕೆ ಸಾಧ್ಯವಾಗುತ್ತದೆ ಎಂದರು. ನಿಮ್ಮ ಮಕ್ಕಳಿಗೆ ಫೋನ್ ಕೊಡಬೇಡಿ ಪ್ರತಿದಿನ ಸಂಜೆಯ ವೇಳೆಯಲ್ಲಿ ಪಾಠ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ದರವರೆಗೆ ಮೊಬೈಲ್ ಫೋನ್ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಅದರಲ್ಲಿ ಹೆಚ್ಚಿನ ಮಕ್ಕಳು ಹಗಲು-ರಾತ್ರಿ ಎನ್ನದೇ ಹೆಚ್ಚಿನ ಸಮಯವನ್ನು ಮೊಬೈಲ್ನಲ್ಲಿ ಕಳೆಯುತ್ತಿದ್ದಾರೆ. ಇದು ಮಕ್ಕಳ ಬೆಳವಣಿಗೆಯ ಮೇಲೆ ತೀವ್ರವಾದ ಪರಿಣಾಮ ಬೀರುವುದರ ಜೊತೆಗೆ ಕಣ್ಣುಗಳಿಗೂ ಹಾನಿವುಂಟುಮಾಡುತ್ತದೆ. ಆಗಾಗಿ ಮೊಬೈಲ್ನಿಂದ ಮಕ್ಕಳನ್ನು ದೂರ ಇರಲು ಯಾವುದೇ ಕಾರಣಕ್ಕೆ ಮೊಬೈಲ್ ಕೊಡಬೇಡಿ ಎಂದು ಪೋಷಕರಿಗೆ ಮನವಿ ಮಾಡಿಕೊಂಡರು.
ಪಟ್ಟಣ ಪಂಚಾಯಿತಿ ಸದಸ್ಯ ಜಾಗನೂರಹಟ್ಟಿ ಮಂಜುನಾಥ ಮಾತನಾಡಿ ಕ್ರೀಡೆಯಲ್ಲಿ ಸೋಲು-ಗೆಲುವು ಸರ್ವೇ ಸಾಮಾನ್ಯ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ, ಕ್ರೀಡಾಪಟುಗಳು ನಿಮ್ಮ ಅಮೂಲ್ಯವಾದ ಆರೋಗ್ಯ ಕಾಪಾಡಿಕೊಳ್ಳಿ ಹಾಗೂ ಓದಿನ ಕಡೆ ಹೆಚ್ಚು ಗಮನಹರಿಸಿ ಎಂದು ಕಿವಿಮಾತು ಹೇಳಿದರು. ಯುವಕರು ದುಷ್ಚಟಗಳಿಂದ ದೂರವಿರಬೇಕು. ಕ್ರೀಡೆಯಿಂದ ಶರೀರದ ಮಾನಸಿಕ ಬೆಳವಣಿಗೆಗೆ ಕ್ರೀಡೆಯು ಪ್ರಮುಖ ಪಾತ್ರವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ದುಷ್ಚಟಗಳಿಗೆ ಬಲಿಯಾಗುವುದರ ಜೊತೆಗೆ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಯುವಕರು ತಂಬಾಕು, ಗುಟ್ಕಗಳ ಸೇವನೆಯಿಂದ ದೂರವಿರಬೇಕು. ಯುವಕರು ದೇಶವನ್ನು ಕಟ್ಟುವಂತವರು ತಮ್ಮ ಭವಿಷ್ಯದ ಜೀವನವನ್ನು ಉಜ್ವಲವಾಗಿ ಇಟ್ಟುಕೊಳ್ಳಲು ದುಷ್ಚಟಗಳಿಂದ ದೂರವಿರಬೇಕು ಎಂದು ಹೇಳಿದರು.
ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಟಿ. ಬಸಣ್ಣ ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಕ್ರೀಡೆಗಳಲ್ಲಿ ಪ್ರೀತಿ, ವಿಶ್ವಾಸ ಸಂಬAಧವಿರಬೇಕೆ ಒರತು ದ್ವೇಶದ ಭಾವನೆ ಹೊಂದಿರಬಾರದು ಮತ್ತು ಅಂಪೇರ್ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ತಿಪ್ಪೇಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಮುತ್ತಯ್ಯ, ಹೋಬಳಿ ಘಟಕದ ಅಧ್ಯಕ್ಷ ಜೋಗಿಹಟ್ಟಿ ಮಂಜುನಾಥ, ಓ.ತಿಪ್ಪೇಶ, ನಗರ ಘಟಕದ ಅಧ್ಯಕ್ಷರು, ದಳಪತಿ ನಾಗರಾಜ್, ಪೂಜಾರಿ ತಿಪ್ಪಯ್ಯ, ಯಜಮಾನ್ ಓಬಯ್ಯ, ಯಜಮಾನ್ ರ್ರಯ್ಯ, ಗೋನೂರು ಬೊಮ್ಮಯ್ಯ, ಕಾಮಯ್ಯ, ದೊಡ್ಡಪಾಲಯ್ಯ, ದೇವಡ್ಲ ಬಸವರಾಜ್, ಬಿ.ಬಸವರಾಜ್, ರಾಜಶೇಖರಪ್ಪ, ಗಾರೆ ಓಬಣ್ಣ, ಅಂಗಡಿ ಮಹಂತೇಶ್, ಕೆ.ಪಿ.ತಿಪ್ಪೇಸ್ವಾಮಿ, ಶಿವರುದ್ರಪ್ಪ, ಮೆಂಬರ್ಬೋರಯ್ಯ, ಕೆ.ಪಿ.ಚಂದ್ರಣ್ಣ, ದಳಪತಿ ಮಹಂತೇಶ್, ಆರ್.ಬಸಣ್ಣ, ಕರಡಿ ಓಬಯ್ಯ, ಪ್ರೊಪೇಸರ್ ಬೋರಯ್ಯ, ಸಣ್ಣಬೋರಯ್ಯ, ಉಜ್ಜಿನಪ್ಪ, ರೆಡಿಬೋರಯ್ಯ, ಬಡಿಗೆ ತಿಪ್ಪೇಸ್ವಾಮಿ,ಕಾಮರಾಜ, ಯಜಮಾನ್ ತಿಪ್ಪೇಸ್ವಾಮಿ, ಸಣ್ಣರಾಜಯ್ಯ, ತಿಪ್ಪೇಸ್ವಾಮಿ, ಸರ್ಕಾರಿ ಶಾಲಾ ಶಿಕ್ಷಕರುಗಳು, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ಶೆಟ್ಟಿ ಬಳಗ ಅಧ್ಯಕ್ಷ ಪ್ರಕಾಶ್, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಟ್ಟಿ ಯಜಮಾನರು, ಇದ್ದರು.