ಹುಬ್ಬಳ್ಳಿ: ವ್ಯಕ್ತಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹೇಶ ಬಳ್ಳಾರಿ ಎಂಬಾತನೇ ನೇಣಿಗೆ ಶರಣಾಗಿದ್ದಾನೆಂದು ಹೇಳಲಾಗಿದ್ದು, ಈತ ಮಂಟೂರ ರಸ್ತೆಯ ಬರ್ನಾಬಸ್ ಹಾಲ್ ಬಳಿಯ ಪಾಳುಬಿದ್ದ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.
ಇನ್ನು ಮಹೇಶ ಬಳ್ಳಾರಿ ಕೌಟುಂಬಿಕ ವಿಚಾರಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಇನ್ನಷ್ಟೇ ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.