ಹುಬ್ಬಳ್ಳಿ: ಗೋಕುಲರೋಡ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹದ ಅಸ್ತಿಪಂಜರವೊಂದು ದೊರೆತ್ತಿದ್ದು, ಮೃತನ ಶವದ ಗುರುತಿಗೆ ಪೋಲಿಸರು ಪ್ರಕಟಣೆ ಹೊರಡಿಸಿದ್ದಾರೆ.
ಹೌದು, ಕಳೆದ ಏ.3 ರಂದು ಗೋಕುಲರೋಡ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಯುಡಿಆರ್ ಪ್ರಕರಣವೊಂದು ದಾಖಲಾಗಿದೆ. ಅಸ್ಥಿಪಂಜರದ ಸಮೀಪವೇ ನೀಲಿ ಕೆಂಪು ಗೆರೆ ಗೆರೆ ಇರುವ ಫುಲ್ ತೋಳಿನ ಚೆಕ್ಸ್ ಶರ್ಟ್, ನೀಲಿ ಬಣ್ಣದ ಪ್ಯಾಂಟ್, ಫ್ಯಾಂಟ್\’ಗೆ ಹಾಕಿದ ಹಸಿರು ಬಣ್ಣದ ರೆಕ್ಸಿನ್ ಬೆಲ್ಟ್, ಪರಾಗೋನ್ ಕಂಪನಿ ಬಕ್ಕಲ್ ಚಪ್ಪಲ್, ಖಾಕಿ ಕಲರಿನ ಲಾಡಿ ಇರುವ ಚಡ್ಡಿ, ಚೆಕ್ಸ್ ಕರವಸ್ತ್ರ ದೊರೆತ್ತಿದೆ.
ಈ ಸಂಬಂಧ ಮೃತನ ಚರಹೆ ಪಟ್ಟಿ ಹೋಲಿಕೆಯಾಗುವ ವ್ಯಕ್ತಿಯ ಗುರುತು ಇದ್ದವರು ಅಥವಾ ಸಂಬಂಧಪಟ್ಟವರು ಕೂಡಲೇ ಗೋಕುಲರಸ್ತೆಯ ಪೋಲಿಸ್ ಠಾಣೆ ಇಲ್ಲವೇ ಕಂಟ್ರೋಲ್ ರೂಮ್ ನಂಬರ್ 08462233525, 08362233521 ಇಲ್ಲವೇ 9480802047 ಗೆ ಸಂಪರ್ಕಿಸಲು ತಿಳಿಸಿದ್ದಾರೆ.