ಹುಬ್ಬಳ್ಳಿ: ಟಾಟಾ ಎ ಎಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಗರದ ಎಪಿಎಂಸಿ ಫೈರ್ ಬ್ರಿಗೇಡ್ ಬಳಿಯಲ್ಲಿ ನಡೆದಿದೆ.
ನಗರದ ಅಮರಗೋಳ ನಿವಾಸಿ ಖಲಂದರ್ (45) ಎಂಬುವವರ ಕಾಲಿಗೆ ಬಲವಾದ ಪೆಟ್ಟು ಬಿದ್ದು ತುಂಡರಿಸಿದಂತಾಗಿದೆ. ಟಾಟಾ ಏಸ್ ಚಾಲಕನ ಅತಿ ವೇಗವೇ ಈ ಘಟನೆಗೆ ಕಾರಣವೆಂಬುದನ್ನು ಸ್ಥಳೀಯರಿಂದ ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ಆತನನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ.