ಹುಬ್ಬಳ್ಳಿ: ಕ್ಷುಲ್ಲಕ ವಿಚಾರವಾಗಿ ಯುವಕನೋರ್ವನ ಮೇಲೆ ಹು-ಧಾ ಪಾಲಿಕೆ ಸದಸ್ಯನೋರ್ವರ ಪುತ್ರ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಗೋಪನಕೊಪ್ಪದ ಸಿದ್ಧರಾಮೇಶ್ವರ ನಗರದಲ್ಲಿ ನಡೆದಿದೆ.
ಅಕ್ಷಯ್ ಒಡ್ಡರ್ ಎಂಬ ಯುವಕನ ತಲೆಗೆ ಇಟ್ಟಂಗಿಯಿಂದ ಪಾಲಿಕೆ ಸದಸ್ಯನೋರ್ವರ ಪುತ್ರ ಶ್ರೀಧರ್ ನರಗುಂದ ಅಲಿಯಾಸ್ \” ಚಿದು \” ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು, ಹಲ್ಲೆಗೊಳಗಾದ ಅಕ್ಷಯ್ ನನ್ನು ಆತನ ಸ್ನೇಹಿತರು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಘಟನೆ ಕುರಿತಂತೆ ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.