ಹುಬ್ಬಳ್ಳಿ: ಇಲ್ಲಿನ ನಗರದ ಎಪಿಎಂಸಿ ಮಾರ್ಕೆಟ್ ನಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ
ಎಪಿಎಂಸಿಯಲ್ಲಿ ಇರುವ ಕುಡಿಯುವ ನೀರಿನ ಟ್ಯಾಂಕ್ ಪಕ್ಕದ ಬಿಲ್ಡಿಂಗ್ನ ಮೆಟ್ಟಲಿಗೆ ನೇಣು ಬಿಗಿದುಕೊಂಡ ರೀತಿಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಸಾವನ್ನಪ್ಪಿದ್ದು, ನಿಖರವಾದ ಮಾಹಿತಿ ತಿಳಿದು ಬರಬೇಕಿದೆ.
ಮೃತ ವ್ಯಕ್ತಿ ಧಾರವಾಡ ನಿವಾಸಿ ರುದ್ರಪ್ಪ ಸಾಂಬ್ರಾಣಿ 56 ಎಂದು ಗುರುತಿಸಲಾಗಿದ್ದು,ಸ್ಥಳಕ್ಕೆ ಎಪಿಎಂಸಿ ಠಾಣಾ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.