ಹುಬ್ಬಳ್ಳಿ: ಮೊಬೈಲ್ ಬಳಕೆ ಮಾಡಬೇಡಾ ಎಂದು ಪಾಲಕರು ತಿಳಿಹೇಳಿದ್ದಕ್ಕೆ ಬಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಭೈರಿದೇವರಕೊಪ್ಪ ಗಾಮನಗಟ್ಟಿ ರಸ್ತೆಯಲ್ಲಿ ಇರುವ ರಾಧಿಕಾ ಪಾರ್ಕ್ ನಲ್ಲಿ ತಡ ರಾತ್ರಿ ನಡೆದಿದೆ.
ಸಮೃದ್ಧ ಎಂಬ ಬಾಲಕನೇ ಆತ್ಮಹತ್ಯೆ ಶರಣಾಗಿರುವ ದುರ್ದೈವಿ. ಮೊಬೈಲ್ ಬಳಕೆ ಮಾಡಬೇಡಾ ಸರಿಯಾಗಿ ವಿದ್ಯಾಭ್ಯಾಸ ಮಾಡು ಎಂದು ಬಾಲಕನ ಪಾಲಕರು ತಿಳಿಹೇಳಿದ್ದಾರೆ.
ತಿಳಿಹೇಳಿದಕ್ಕೆ ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಬಾಲಕನ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿದೆ.
ಘಟನೆ ಕುರಿತಂತೆ ಎಪಿಎಂಸಿ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.