ಹುಬ್ಬಳ್ಳಿ: ಹೊರ ರಾಜ್ಯದ ಯುಪಿ ಹಾಗೂ ಬಿಹಾರ ಮೂಲದ ಪುಂಡರ ಗ್ಯಾಂಗೊಂದು ಇಬ್ಬರು ಯುವಕರ ಮೇಲೆ ಹರಿತವಾದ ಆಯುಧದಿಂದ ಇರಿದಿರುವ ಘಟನೆ ನಡೆದಿದೆ.
ಇಲ್ಲಿನ ವಿಜಯನಗರದ ವಡ್ಡರ ಓಣಿಯಲ್ಲಿ ಮದ್ಯಪಾನ ಮಾಡಿದ ಮತ್ತಿನಲ್ಲಿ ಇದ್ದ ಗ್ಯಾಂಗ್ ಪುಂಡಾಟ ಮೆರೆದಿದ್ದು ಇಬ್ಬರು ಯುವಕರಾದ, ಸಂಜಯ್ ಹಾಗೂ ಸೈಫ್ ಎಂಬುವವರಿಗೆ ತಲೆ, ಎದೆ ಹಾಗೂ ಕಾಲಿಗೆ ಇರಿದಿದ್ದಾರೆ.
ಆರೋಪಿಗಳಾದ ನಾಗೇಂದ್ರ , ಅನಿಕೇತ್, ಸರವನ್ ಹಾಗೂ ಬಬ್ಲೂ ಚೌಹಾನ್ ನಿಂದ ಈ ಕೃತ್ಯ ನಡೆದಿದ್ದು, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಸಂದರ್ಭದಲ್ಲಿ ಸಂಜಯ್ ಹಾಗೂ ಸೈಫ್ ಪ್ರಶ್ನೆ ಮಾಡಿದಾಗ ಈ ಘಟನೆ ಸಂಭವಿಸಿದೆ.
ಸದ್ಯ ಹಲ್ಲೆಗೆ ಒಳಗಾದ ಯುವಕರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಘಟನೆ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.