ಪ್ರೀತ್ಸೆ ಪ್ರೀತ್ಸೆ ಅಂತ ಹುಡುಗಿಯ ಹಿಂದ ಬಿದ್ದ ಪಾಗಲ್ ಪ್ರೇಮಿ ತಾನು ಪ್ರೀತಿಸುತ್ತಿರುವ ಹುಡುಗಿಯ ತಾಯಿಗೆ ಚಾಕು ಇರಿದ ಘಟನೆ ನಗರದ ಲೋಹಿಯಾ ನಗರದಲ್ಲಿ ಇಂದು ನಡೆದಿದೆ.
ಮಹೇಶ್ (24) ಎಂಬಾತನೇ ನೀಲಾ ಹಂಪಣ್ಣವರ್ ಎಂಬ ಮಹಿಳೆಗೆ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ. ಚಾಕು ಇರಿದು ಪರಾರಿಯಾಗಿದ್ದ ಮಹೇಶ್ ನನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ಮಾಧ್ಯಮಕ್ಕೆ ಪರಿಕ್ರಿಯೇ ನೀಡಿದ ಪೋಲಿಸ್ ಕಮೀಷನರ್ ಎನ್ ಶಶಿಕುಮಾರ್*
ಗಾಯಗೊಂಡಿರುವ ನೀಲಾ ಮಗಳಿಗೆ ಆರೋಪಿ ಮಹೇಶ್ ಮದುವೆಯಾಗು, ಲವ್ ಮಾಡು ಎಂದು ಐದು ವರ್ಷದಿಂದ ಬಲವಂತ ಮಾಡುತ್ತಿದ್ದ ಇಂದು ಏಕಾಏಕಿ ಬಂದು ನೀಲಾ ಎಂಬ ಮಹಿಳೆಗೆ ಚಾಕು ಇರಿದು ಪರಾರಿಯಾಗಿದ್ದ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹು-ಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತಿಳಿಸಿದರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು , ಹುಬ್ಬಳ್ಳಿಯ ಲೋಹಿಯಾ ಕಾಲೋನಿಯಲ್ಲಿ ಮಹೇಶ್ ಎಂಬಾತ ಏಕಾಏಕಿ ಬಂದು ನಿಮ್ಮನೆಲ್ಲಾ ಕೊಲೆ ಮಾಡುತ್ತೇನೆಂದು ಭಯಪಡಿಸಿ ನೀಲಾ ಎಂಬ ಮಹಿಳೆಗೆ ಚಾಕು ಇರಿದಿದ್ದಾನೆ. ಅಲ್ಲದೇ ಅಲ್ಲಿದ್ದವರಿಗೆ ಹಲ್ಲೆ ಮಾಡಲು ಮುಂದಾಗಿದ್ದಾಗ, ಆಗ ಎಲ್ಲರೂ ಸೇರಿ ಆತನನ್ನು ಹೊರ ಹಾಕಿದ್ದಾರೆ, ಬಳಿಕ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ. ಚಾಕು ಇರಿತದಿಂದ ಗಾಯಗೊಂಡಿದ್ದ ನೀಲಾ ಎಂಬ ಮಹಿಳೆಯನ್ನು ಸ್ಥಳೀಯರು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.